ಮುಂಬೈ: ಬಾಂಗ್ಲಾದೇಶದ ವಿರುದ್ಧ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯವಾಡಿ ಗೆದ್ದ ನಂತರ ಭಾರತ ತಂಡ ವಿದೇಶದಲ್ಲೂ ಪಿಂಕ್ ಬಾಲ್ನಲ್ಲಿ ಆಡುವ ಉತ್ಸಾಹ ತೋರಿದೆ. ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ತಿಂಗಳ ಹಿಂದೆಯಷ್ಟೇ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತ ವಿಶ್ವದ ಯಾವುದೇ ದೇಶದಲ್ಲಾದರೂ ಪಿಂಕ್ ಬಾಲ್ ಟೆಸ್ಟ್ ಆಡಲು ಸಿದ್ಧವಿದೆ. ಈ ಮೊದಲು ತಾವೇ ತಿರಸ್ಕರಿಸಿದ್ದ ಆಸ್ಟ್ರೇಲಿಯಾದಲ್ಲೂ ಕೂಡ ಎಲ್ಲಿ ಬೇಕಾದರೂ ಹಗಲುರಾತ್ರಿ ಪಂದ್ಯವಾಡಲು ನಾವು ಸಿದ್ಧ ಎಂದಿದ್ದರು.
ಇದೀಗ ಬಿಸಿಸಿಐ ಕೂಡ ಕೊಹ್ಲಿ ಮಾತನ್ನು ಎತ್ತಿ ಹಿಡಿದಿದ್ದು, ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಗಲು-ರಾತ್ರಿ ಪಂದ್ಯ ಆಡುವ ಸಾಧ್ಯತೆ ಇದೆ ಬಿಸಿಸಿಐ ಮೂಲಗಳು ತಿಳಿಸಿವೆ.