ಸಿಡ್ನಿ:ಫೈನಲ್ನಲ್ಲಿ ಆಸ್ಟ್ರೇಲಿಯಾ ಮಣಿಸಿ ವಿಶ್ವಕಪ್ ಜಯಿಸಿದ್ದೇ ಆದಲ್ಲಿ ನಮಗೆ ಭಾರತದಲ್ಲಿ ನಮಗೆ ಸಾಕಷ್ಟು ಪ್ರೀತಿ ಸಿಗಲಿದೆ ಎಂದು ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಡೆಯಬೇಕಿದ್ದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಲೀಗ್ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದರಿಂದ ಭಾರತ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಇನ್ನು ಗುರುವಾರ ಸೆಮಿಫೈನಲ್ ಪಂದ್ಯದ ವೀಕ್ಷಣೆಗೆ ಹರ್ಮನ್ ಪ್ರೀತ್ ಕೌರ್ ಪೋಷಕರು ತಮ್ಮ ಮಗಳ ಆಟವನ್ನು ಕಣ್ತುಂಬಿಕೊಳ್ಳಲು ಸಿಡ್ನಿಗೆ ಧಾವಿಸಿದ್ದರು. ಆದರೆ ಮಳೆ ಕಾರಣ ಪಂದ್ಯ ರದ್ದಾಗಿದ್ದರಿಂದ ಇದೇ ಮೊದಲ ಬಾರಿಗೆ ಮಗಳ ಆಟವನ್ನು ನೋಡಲು ಬಂದಿದ್ದವರಿಗೆ ಬೇಸರ ತರಿಸಿದೆ.
ಮಹಿಳೆಯರ ಟಿ20 ವಿಶ್ವಕಪ್ ಫೈನಲ್ಸ್ "ನಾನು ಶಾಲಾ ದಿನಗಳಿಂದ ಕ್ರಿಕೆಟ್ ಆಡುತ್ತಿದ್ದರೂ ನನ್ನ ತಂದೆ ನಾನು ಆಡುವುದನ್ನು ನೋಡಿರಲಿಲ್ಲ. ಆದರೆ ಇಂದು ಇದೇ ಮೊದಲ ಬಾರಿಗೆ ನನಗೂ ಕೂಡ ನನ್ನ ತಂದೆ-ತಾಯಿ ನಾನು ಕ್ರಿಕೆಟ್ ಆಡುವುದನ್ನು ನೋಡಬೇಕು ಎಂದುಕೊಂಡಿದ್ದೆ, ಅದು ಈ ಸಮಯದಲ್ಲಿ ಸಾಧ್ಯವಾಗುತ್ತಿದೆ" ಎಂದು ಖುಷಿಪಟ್ಟರು.
ಮಾರ್ಚ್ 8ರಂದು ಫೈನಲ್ ಪಂದ್ಯ ನಡೆಯಲಿದ್ದು, ಅಂದೇ ಹರ್ಮನ್ ಪ್ರೀತ್ ಕೌರ್ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಅವರ ಪೋಷಕರು ಕೂಡ ಆಸ್ಟ್ರೇಲಿಯಾದಲ್ಲೇ ಉಳಿಯಲಿದ್ದು ಪಂದ್ಯ ವೀಕ್ಷಿಸಲಿದ್ದಾರೆ ಎಂದು ಕೌರ್ ತಿಳಿಸಿದ್ದಾರೆ.