ವಡೋದರ:ತಂಡದ ಕೋಚ್ ಡೇವ್ ವಾಟ್ಮೋರ್ ಅವರನ್ನು ತರಬೇತಿಯಲ್ಲಿ ತೊಡಗಿಸಿಕೊಳ್ಳಲು ಪ್ರಸ್ತುತ ಕಷ್ಟವಾಗಿದೆ. ಬಿಸಿಸಿಐನ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದಲ್ಲಿ 60 ವರ್ಷ ಮೇಲ್ಪಟ್ಟವರು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳವುದನ್ನು ನಿರ್ಬಂಧಿಸಲಾಗಿದೆ ಎಂದು ಬರೋಡ ಕ್ರಿಕೆಟ್ ಅಸೋಸಿಯೇಷನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ಬಿಸಿಸಿಐ ತರಬೇತಿ ಶಿಬಿರ ಆರಂಭಿಸುವುದಕ್ಕಾಗಿ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಎಸ್ಒಪಿಯನ್ನು ಕಳುಹಿಸಿದೆ. ಕೊರೊನಾ ಮಧ್ಯೆಯೆ ತರಬೇತಿ ಆರಂಭಿಸುತ್ತಿರುವುದರಿಂದ 60 ವಯಸ್ಸು ಮೇಲ್ಪಟ್ಟವರ ಪಾಲ್ಗೊಳ್ಳುವಿಕೆ ನಿರ್ಭಂದ ಏರಲಾಗಿದೆ. " ವಾಟ್ಮೋರ್ ಅವರನ್ನು ತರಬೇತಿಯಲ್ಲಿ ತೊಡಗಿಸಿಕೊಳ್ಳುವುದು ನಮಗೆ ಈಗ ಕಷ್ಟವಾಗಿದ" ಎಂದು ಬಿಸಿಎ ಅಧಿಕಾರಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
66 ವರ್ಷದ ಆಸ್ಟ್ರೇಲಿಯಾದ ಡೇವ್ ವಾಟ್ಮೋರ್ ಬರೋಡದ ರಣಜಿ ತಂಡದ ಕೋಚ್ ಹಾಗೂ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕಗೊಂಡಿದ್ದಾರೆ.