ಕರ್ನಾಟಕ

karnataka

ETV Bharat / sports

ಮಿಸ್ಬಾ ಮತ್ತು ಸಹಚರರು ತಂಡ ಬಿಟ್ಟರೆ ಮತ್ತೆ ಪಾಕ್ ಪರ ಆಡುವೆ; ಮೊಹಮ್ಮದ್ ಅಮೀರ್​

ಎರಡು ವರ್ಷಗಳ ಹಿಂದೆಯೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ 28 ವರ್ಷದ ವೇಗಿ ಕಳೆದ ತಿಂಗಳು ಪಿಸಿಬಿಯಿಂದ ತಾವೂ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ನಂತರ ಕೋಚ್​ಗಳಾದ ಮಿಸ್ಬಾ, ವಕಾರ್​ ಯೂನುಸ್​ ತಮ್ಮ ವರ್ಚಸ್ಸನ್ನು ನಾಶ ಮಾಡಿದರೆಂದು ಕಿಡಿಕಾರಿದ್ದರು.

ಮೊಹಮ್ಮದ್ ಅಮೀರ್​ ನಿವೃತ್ತಿ
ಮೊಹಮ್ಮದ್ ಅಮೀರ್​ ನಿವೃತ್ತಿ

By

Published : Jan 18, 2021, 8:01 PM IST

ಕರಾಚಿ:ಕಳೆದ ತಿಂಗಳು ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿ ಪಿಸಿಬಿ ವಿರುದ್ಧ ಕಿಡಿಕಾರಿದ್ದ ಎಡಗೈ ವೇಗಿ ಮೊಹಮ್ಮದ್ ಅಮೀರ್​, ಇದೀಗ ಮತ್ತೆ ತಾವು ಪಾಕಿಸ್ತಾನ ತಂಡದ ಪರ ಆಡಬೇಕಾದರೆ ಪ್ರಸ್ತುತ ಕೋಚ್​ ಆಗಿರುವ ಮಿಸ್ಬಾ ಉಲ್ ಹಕ್​ ಮತ್ತು ಅವರ ಸಹಚರರು ಪಾಕಿಸ್ತಾನ ತಂಡವನ್ನು ಬಿಟ್ಟು ಹೋಗಬೇಕೆಂದು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆಯೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ 28 ವರ್ಷದ ವೇಗಿ ಕಳೆದ ತಿಂಗಳು ಪಿಸಿಬಿಯಿಂದ ತಾವು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದು, ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ನಂತರ ಕೋಚ್​ಗಳಾದ ಮಿಸ್ಬಾ, ವಕಾರ್​ ಯೂನುಸ್​ ತಮ್ಮ ವರ್ಚಸ್ಸನ್ನು ನಾಶ ಮಾಡಿದರೆಂದು ಕಿಡಿಕಾರಿದ್ದರು.

"ಈಗಿರುವ ನಿರ್ವಹಣಾ ಮಂಡಳಿ ಪಿಸಿಬಿಯನ್ನು ತ್ಯಜಿಸಿದ ನಂತರ ಮತ್ತೆ ನಾನು ಪಾಕಿಸ್ತಾನ ತಂಡದ ಪರ ಆಡಲು ಲಭ್ಯನಾಗುತ್ತೇನೆ ಎಂದು ತಿಳಿಸಲು ಇಚ್ಛಿಸುತ್ತೇನೆ. ದಯವಿಟ್ಟು ನಿಮ್ಮ ಕಥೆಗಳನ್ನು ಮಾರಾಟ ಮಾಡಲು ಸುಳ್ಳುಸುದ್ದಿಯನ್ನು ಹಬ್ಬಿಸುವುದನ್ನು ಮೊದಲು ನಿಲ್ಲಿಸಿ." ಎಂದು ಅಮೀರ್ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಅಮೀರ್​ ತಾವು ದಿಢೀರ್​ ನಿವೃತ್ತಿ ಘೋಷಿಸುವುದಕ್ಕೆ ಡ್ರೆಸ್ಸಿಂಗ್​ ರೂಮ್​ನ ಪರಿಸರವೇ ಕಾರಣ. ಆಟಗಾರರಿಗೆ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದು ತಿಳಿಸಿದ್ದ ಅವರು, ಡ್ರೆಸ್ಸಿಂಗ್​ ರೂಂ ನಲ್ಲಿ ಭಯಾನಕ ವಾತಾವರಣವನ್ನು ಕೊನೆಗೊಳಿಸಿ, ನಂತರ ಆಟಗಾರರು ನಿಮಗೆ ಪಂದ್ಯಗಳನ್ನು ಗೆದ್ದುಕೊಡಲಿದ್ದಾರೆ ಎಂದು ಪಾಕ್ ತಂಡದ ಸಹಾಯಕ ಸಿಬ್ಬಂದಿಯನ್ನು ಟೀಕಿಸಿದ್ದರು.

ABOUT THE AUTHOR

...view details