ಕರ್ನಾಟಕ

karnataka

ETV Bharat / sports

ಚೆಂಡು ಸ್ಟಂಪ್‌ ದಾಟೋದಕ್ಕೂ ಮುನ್ನ ರಿಷಭ್‌ ಪಂತ್‌ ಆತುರ! ಯಡವಟ್ಟಿಗೆ ಕ್ಯಾಪ್ಟನ್‌ ಬೇಸರ! ವಿಡಿಯೋ

ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ರಿಷಭ್​ ಪಂತ್​ ಮಾಡಿರುವ ಯಡವಟ್ಟು ಟೀಂ ಇಂಡಿಯಾ ತಂಡಕ್ಕೆ ಮಾರಕವಾಗಿ ಪರಿಣಮಿಸಿತು.

ರಿಷಭ್​ ಪಂತ್​ ಎಡವಟ್ಟು

By

Published : Nov 7, 2019, 8:12 PM IST

ರಾಜ್​​ಕೋಟ್​​:ಪ್ರವಾಸಿ ಬಾಂಗ್ಲಾದೇಶದ ವಿರುದ್ಧ ರಾಜ್​ಕೋಟ್​ ಮೈದಾನದಲ್ಲಿ ಎರಡನೇ ಟಿ20 ಪಂದ್ಯದಲ್ಲಿ ವಿಕೆಟ್​ ಕೀಪರ್​ ರಿಷಭ್​ ಪಂತ್​ ಮಾಡಿರುವ ಯಡವಟ್ಟು ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಮೈದಾನಕ್ಕಿಳಿದ ಬಾಂಗ್ಲಾ ತಂಡದ ಲಿಟನ್​ ದಾಸ್​ ಹಾಗೂ ನಯೀಮ್​ ಟೀಂ ಇಂಡಿಯಾ ಬೌಲರ್​ಗಳ ಬೆವರಿಳಿಸಿದರು. ಈ ಜೋಡಿ 5 ಓವರ್​ಗಳಲ್ಲೇ 10 ರನ್ನುಗಳ ಸರಾಸರಿಯಲ್ಲಿ 50 ರನ್ ​ಗಳಿಸಿದ್ರು.

ಪಂದ್ಯದ 6ನೇ ಓವರ್​ ಮಾಡಲು ಕಣಕ್ಕಿಳಿದ ಚಹಾಲ್​ ಸ್ಪಿನ್ ಮೋಡಿ ಮೂಲಕ​ ಬ್ಯಾಟ್ಸ್​​ಮನ್​ಗಳಲ್ಲಿ ನಡುಕ ಹುಟ್ಟಿಸಿದರು. ಈ ವೇಳೆ ಅವರು ಎಸೆದ 5.3ನೇ ಓವರಿನ ಎಸೆತದಲ್ಲಿ ಲಿಟನ್​ ದಾಸ್​​ ಕ್ರೀಸ್‌​ ಬಿಟ್ಟು ದೊಡ್ಡ ಹೊಡೆತಕ್ಕೆ ಮುಂದಾಗುತ್ತಾರೆ. ಆದರೆ ಚೆಂಡು ನೇರವಾಗಿ ವಿಕೆಟ್​ ಕೀಪರ್​ ಕೈಸೇರಿಕೊಂಡಿದೆ. ಈ ವೇಳೆ ಆತುರಗೇಡಿಗೆ ಬುದ್ದಿ ಮಂದ ಅನ್ನೊ ಮಾತಿನ ಹಾಗೆ ಚೆಂಡು ಸ್ಟಂಪ್ ದಾಟುವುದಕ್ಕೂ ಮುಂಚಿತವಾಗಿ ರಿಷಭ್​ ಪಂತ್​ ಸ್ಟಂಪ್​ ಔಟ್​ ಮಾಡುತ್ತಾರೆ. ಆದರೆ ಈ ವೇಳೆ ಅಂಪೈರ್​ 'ನೋ ಬಾಲ್'​ ಎಂದು ಘೋಷಣೆ ಮಾಡಿಬಿಟ್ಟರು.

ರಿಷಭ್​ ಪಂತ್​ ಮಾಡಿರುವ ಈ ತಪ್ಪಿನಿಂದ ಕ್ಯಾಪ್ಟನ್​ ರೋಹಿತ್ ಶರ್ಮಾ ಹಾಗೂ ಬೌಲರ್​ ಯಜುವೇಂದ್ರ ಚಹಾಲ್​ ಬೇಸರ ವ್ಯಕ್ತಪಡಿಸಿದರು. ಐಸಿಸಿ ನಿಯಮದ ಪ್ರಕಾರ, ವಿಕೆಟ್​ ಕೀಪರ್​​ ಸ್ಟಂಪ್​ಗೂ ಮೊದಲೇ ಚೆಂಡು ಕಲೆಕ್ಟ್​ ಮಾಡಿಕೊಂಡು ಸ್ಟಂಪಿಂಗ್​ ಮಾಡುವ ಹಾಗಿಲ್ಲ. ಆದರೆ ಇಂದಿನ ಪಂದ್ಯದಲ್ಲಿ ರಿಷಭ್​ ಈ ರೀತಿಯಾಗಿ ಮಾಡಿದ್ದು ಕ್ರಿಕೆಟಿಗರ​ ಕೆಂಗಣ್ಣಿಗೆ ಗುರಿಯಾಗಿದೆ.

ABOUT THE AUTHOR

...view details