ಕರ್ನಾಟಕ

karnataka

ವಿಂಡೀಸ್​ನ ಸಹಾಯಕ ಕೋಚ್​ ಆದ ಟೀಂ ಇಂಡಿಯಾ ಮಾಜಿ ಫೀಲ್ಡಿಂಗ್​ ತರಬೇತುದಾರ​..

By

Published : Dec 31, 2019, 6:59 PM IST

ಇಂಗ್ಲೆಂಡ್​ ವಾರ್ಕ್​ಶೈರ್​ ತಂಡದ ಮಾಜಿ ಆಟಗಾರರಾಗಿರುವ ಟ್ರೆವರ್​ರನ್ನು​ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ 2 ವರ್ಷದ ಅವಧಿಗೆ ಟಿ20 ಹಾಗೂ ಏಕದಿನ ಕ್ರಿಕೆಟ್​ ತಂಡಗಳಿಗೆ ಸಹಾಯಕ ಕೋಚ್​ ಆಗಿ ನೇಮಕ ಮಾಡಿಕೊಂಡಿದೆ.

WI appoints Trevor Penney
WI appoints Trevor Penney


ಸೇಂಟ್​ ಜಾನ್ಸ್​:ಭಾರತದ ಮಾಜಿ ಫೀಲ್ಡಿಂಗ್​ ಕೋಚ್​ ಟ್ರೆವರ್​ ಪೆನ್ನಿ ವೆಸ್ಟ್​ ಇಂಡೀಸ್​ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.

ಇಂಗ್ಲೆಂಡ್​ ವಾರ್ಕ್​ಶೈರ್​ ತಂಡದ ಮಾಜಿ ಆಟಗಾರರಾಗಿರುವ ಟ್ರೆವರ್​ರನ್ನು​ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ 2 ವರ್ಷದ ಅವಧಿಗೆ ಟಿ20 ಹಾಗೂ ಏಕದಿನ ಕ್ರಿಕೆಟ್​ ತಂಡಗಳಿಗೆ ಸಹಾಯಕ ಕೋಚ್​ ಆಗಿ ನೇಮಕ ಮಾಡಿಕೊಂಡಿದೆ.

ಈ ಕುರಿತು ಹೇಳಿಕೆ ನೀಡಿರುವ ವೆಸ್ಟ್​ ಇಂಡೀಸ್​ ಕ್ರಿಕೆಟ್ ಮಂಡಳಿ, 51 ವರ್ಷದ ಟ್ರೆವರ್ ಅವರ ಫೀಲ್ಡಿಂಗ್​ ಕ್ಷೇತ್ರದಲ್ಲಿನ ಅನುಭವ ವೈಟ್​ ಬಾಲ್​ ಕ್ರಿಕೆಟ್​​ನಲ್ಲಿ ವಿಂಡೀಸ್​ ತಂಡಕ್ಕೆ ಅನುಕೂಲವಾಗಲಿದೆ. ಅವರು ಜನವರಿ 2 ರಂದು ತಂಡ ಸೇರಿಕೊಳ್ಳಲಿದ್ದು, ಐರ್ಲೆಂಡ್​ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ತಂಡದ ಭಾಗವಾಗಲಿದ್ದಾರೆ ಎಂದು ತಿಳಿಸಿದೆ.

ವಿಂಡೀಸ್​ ತಂಡಕ್ಕೆ ಕೋಚ್​ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಟ್ರೆವರ್​ ಪೆನ್ನಿ, ಕೀರನ್​ ಪೊಲಾರ್ಡ್​ ಹಾಗೂ ಕೋಚ್​ ಫಿಲ್​ ಸಿಮನ್ಸ್​ ಜೊತೆ ಕೆಲಸ ಮಾಡುವುದಕ್ಕೆ ನನಗೆ ಉತ್ತಮ ಅವಕಾಶ ಸಿಕ್ಕಿದೆ. 2020 ಹಾಗೂ 2021ರ ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್​ ತಂಡ ಗೆಲ್ಲಿಸಿ ಕೊಡುವುದಕ್ಕೆ ಪ್ರಯತ್ನಿಸುತ್ತೇನೆ. ನನ್ನ ಪ್ರಕಾರ ವೆಸ್ಟ್​ ಇಂಡೀಸ್​ ತಂಡ ಈ ಎರಡು ದೊಡ್ಡ ಟೂರ್ನಿಗಳನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.

ಟ್ರೆವರ್​ ಪೆನ್ನಿ ಈ ಹಿಂದೆ ಐಪಿಎಲ್​ನ ಕಿಂಗ್ಸ್​ ಇಲೆವೆನ್​ ಪಂಜಾಬ್​, ಡೆಕ್ಕನ್​ ಚಾರ್ಜಸ್​, ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸಹಾಯಕ ಕೋಚ್​ ಆಗಿ ಸೇವೆ ಸಲ್ಲಿಸಿದ್ದರು. ಸಿಪಿಎಲ್​ನಲ್ಲೂ ಸೇಂಟ್​​ ಲೂಸಿಯಾ ಜೌಕ್ಸ್​, ಸೇಂಟ್​ ಕಿಟ್ಸ್​ ಅಂಡ್​ ನೇವಿಸ್​ ಪ್ಯಾಟ್ರಿಯೋಟ್ಸ್​ ಹಾಗೂ ಪ್ರಸ್ತುತ ಚಾಂಪಿಯನ್​ ಬಾರ್ಬಡಸ್​ ಟ್ರಿಡೆಂಟ್​ ತಂಡದ ಕೋಚ್​ ಬಳಗದಲ್ಲೂ ಕಾರ್ಯ ನಿರ್ವಹಿಸಿದ್ದರು.

ABOUT THE AUTHOR

...view details