ಮುಂಬೈ:ಭಾರತ ತಂಡ ಕಿವೀಸ್ ಪ್ರವಾಸ ಕೈಗೊಂಡಿದ್ದು ಗಾಯಾಳು ಧವನ್ ಬದಲಿಗೆ ಯುವ ಆಟಗಾರ ಪೃಥ್ವಿ ಶಾರನ್ನು ಆಯ್ಕೆ ಮಾಡಿದೆ. ಆದರೆ ಅವರಿಗಿಂತ ಅನುಭವಿಯಾಗಿರುವ ಮಯಾಂಕ್ರನ್ನು ಕಡೆಗಣಿಸಿರುವುದು ಆಶ್ಚರ್ಯವಾಗಿದೆ.
ಕರ್ನಾಟಕದ ಮಯಾಂಕ್ ಅಗರ್ವಾಲ್ ಈ ಹಿಂದೆ ಶಿಖರ್ ಧವನ್ ಗಾಯಗೊಂಡ ಎರಡು ಸಂದರ್ಭದಲ್ಲಿ ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಕೊಂಡಿದ್ದರು. ವಿಶ್ವಕಪ್ನಲ್ಲಿ ಧವನ್ ಗಾಯಗೊಂಡಾಗ ಅಂಬಾಟಿ ರಾಯುಡುರನ್ನು ಕಡೆಗಣಿಸಿದ್ದೇಕೆ ಎಂಬ ಪ್ರಶ್ನೆಗೆ ಬಿಸಿಸಿಐ ಆರಂಭಿಕನ ಸ್ಥಾನಕ್ಕೆ ಆರಂಭಿಕನನ್ನೇ ಆಯ್ಕೆಮಾಡಿದ್ದೇವೆ ಎಂದು ಉತ್ತರಿಸಿತ್ತು.
ಆದರೆ ಈ ಬಾರಿ ಶಿಖರ್ ಧವನ್ ಗಾಯಗೊಂಡಿದ್ದು, ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಮಾತ್ರ ಮಯಾಂಕ್ ಅಗರ್ವಾಲ್ರನ್ನು ಕಡೆಗಣಿಸಿ ಪೃಥ್ವಿ ಶಾರನ್ನು ಆಯ್ಕೆ ಮಾಡಿರುವುದೇ ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆಮಯಾಂಕ್ ಅಗರ್ವಾಲ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ಪೃಥ್ವಿ ಶಾಗಿಂತ ಅತ್ಯುತ್ತಮ ಅಂಕಿಅಂಶ ಹೊಂದಿದ್ದಾರೆ.
ಪೃಥ್ವಿ ಶಾ 21 ಲಿಸ್ಟ್ ಎ ಪಂದ್ಯಗಳಲ್ಲಿ 44.25 ಸರಾರಸರಿಯಲ್ಲಿ 1195 ರನ್ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 6 ಅರ್ಧಶತಕ ಸೇರಿದೆ. ಮಯಾಂಕ್ ಅಗರ್ವಾಲ್ 81 ಲಿಸ್ಟ್ ಎ ಪಂದ್ಯಗಳಲ್ಲಿ 50.11 ಸರಾಸರಿಯಲ್ಲಿ 3909ರನ್ಗಳಿಸಿದ್ದಾರೆ. ಅವರು 15 ಅರ್ಧಶತಕ, 13 ಶತಕಗಳಿಸಿದ್ದಾರೆ. ಇನ್ನು ಮತ್ತೊಬ್ಬ ಉದಯೋನ್ಮುಖ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ 53 ಏಕದಿನ ಪಂದ್ಯಗಳಲ್ಲಿ 47.53 ಸರಾಸರಿಯಲ್ಲಿ 2234 ರನ್ಗಳಿಸಿದ್ದಾರೆ. ಇವರು 11 ಅರ್ಧಶತಕ ಹಾಗೂ 6 ಶತಕ ಸಿಡಿಸಿದ್ದಾರೆ.