ಅಬುಧಾಬಿ:ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಮೊಹಮ್ಮದ್ ಸಿರಾಜ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ತಾವು ಎಸೆದ 4 ಓವರ್ಗಳಲ್ಲಿ ಕೇವಲ 8ರನ್ ನೀಡಿ ಪ್ರಮುಖ ಮೂರು ವಿಕೆಟ್ ಪಡೆದುಕೊಂಡಿರುವ ಜತೆಗೆ ಎರಡು ಮೆಡನ್ ಓವರ್ ಮಾಡಿದ್ದಾರೆ.
ಲೆಕ್ಕವಿಲ್ಲದಷ್ಟು ಸಲ ಟ್ರೋಲ್ಗೊಳಗಾಗಿದ್ದ ಸಿರಾಜ್,ಈಗ ಹೀರೋ: ತಮ್ಮ ಪ್ರದರ್ಶನದ ಬಗ್ಗೆ ಹೇಳಿದ್ದಿಷ್ಟು!? - ಐಪಿಎಲ್ನಲ್ಲಿ ಮೊಹಮ್ಮದ್ ಸಿರಾಜ್ ನೂತನ ದಾಖಲೆ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೈದರಾಬಾದ್ನ ಹುಡುಗ ಮೊಹಮ್ಮದ್ ಸಿರಾಜ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಪ್ರದರ್ಶನದ ಮೂಲಕ ಐಪಿಎಲ್ ಇತಿಹಾಸದಲ್ಲೇ ಯಾರು ನಿರ್ಮಾಣ ಮಾಡದಂತಹ ರೆಕಾರ್ಡ್ ಬರೆದಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಇದಾಗಿದ್ದು, ತಮ್ಮ ಅದ್ಭುತ ಪ್ರದರ್ಶನದ ಬಗ್ಗೆ ಸಿರಾಜ್ ಖುದ್ದಾಗಿ ಮಾತನಾಡಿದ್ದಾರೆ. ನನ್ನ ಪ್ರದರ್ಶನಕ್ಕಾಗಿ ನಾನು ಮೊದಲು ಅಲ್ಲಾಹನಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಂತರ ನನಗೆ ಹೊಸ ಚೆಂಡು ನೀಡಿ ಬೌಲಿಂಗ್ ಮಾಡಲು ಪ್ರೋತ್ಸಾಹಿಸಿದ ವಿರಾಟ್ ಕೊಹ್ಲಿ ಅವರಿಗೂ ಧನ್ಯವಾದಗಳು. ನೆಟ್ನಲ್ಲಿ ಹೊಸ ಚೆಂಡಿನೊಂದಿಗೆ ಸಾಕಷ್ಟು ಅಭ್ಯಾಸ ಮಾಡುತ್ತಿದ್ದೆ. ಆದರೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಬೌಲ್ ಮಾಡುವ ಯೋಜನೆ ಇರಲಿಲ್ಲ. ಮೈದಾನಕ್ಕಿಳಿದಾಗ ವಿರಾಟ್ ಭಾಯ್, ಮೊದಲ ಓವರ್ಗಾಗಿ ಸಿದ್ಧರಾಗಿ ಎಂದು ಹೇಳಿದರು ಎಂದಿದ್ದಾರೆ.
ಸಿರಾಜ್ ಎಸೆದ ಮೊದಲ ಓವರ್ನಲ್ಲೇ ತ್ರಿಪಾಠಿ ಹಾಗೂ ನಂತರದ ಎಸೆತದಲ್ಲೇ ನಿತೀಶ್ ರಾಣಾ ವಿಕೆಟ್ ಪಡೆದುಕೊಂಡರು.ರಾಣಾಗೆ ಎಸೆದ ಚೆಂಡು ಅದ್ಭುತವಾಗಿತ್ತು ಎಂದು ತಿಳಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಪರ ಆಡಿರುವ ಮೊಹಮ್ಮದ್ ಸಿರಾಜ್ ಲೆಕ್ಕವಿಲ್ಲದಷ್ಟು ಸಲ ಟ್ರೋಲ್ಗೊಳಗಾಗಿದ್ದರು.