ಕರ್ನಾಟಕ

karnataka

By

Published : May 2, 2020, 3:08 PM IST

ETV Bharat / sports

ಧೋನಿ ಮೈದಾನದೊಳಗಷ್ಟೇ ಅಲ್ಲ, ಹೊರಗೂ ನನಗೆ ಮಾರ್ಗದರ್ಶಕರು: ರಿಷಭ್​ ಪಂತ್​

ಎಂ.ಎಸ್.ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿಯ ಯುವ ಬ್ಯಾಟ್ಸ್​ಮನ್,​ ಡೆಲ್ಲಿ ಕ್ಯಾಪಿಟಲ್​ ಜೊತೆಗೆ ನಡೆದ ಇನ್ಸ್ಟಾಗ್ರಾಮ್ ಲೈವ್​ ಸಂವಾದದಲ್ಲಿ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಷಭ್​ ಪಂತ್​
ರಿಷಭ್​ ಪಂತ್​

ಮುಂಬೈ:ಭಾರತದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ನನಗೆ ಮೈದಾನದ ಹೊರಗೆ ಹಾಗೂ ಒಳಗೆ ಹಾಗೂ ಹೊರಗೆ ಮಾರ್ಗದರ್ಶಕರಾಗಿದ್ದಾರೆ. ಅವರಿಂದ ಬಹಳಷ್ಟು ಕಲಿತಿದ್ದೇನೆ ಎಂದು ಯುವ ವಿಕೆಟ್​ ಕೀಪರ್​ ರಿಷಭ್​ ಪಂತ್​ ಅಭಿಪ್ರಾಯಪಟ್ಟಿದ್ದಾರೆ.

ಎಂ.ಎಸ್.​ ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಕೊನೆಯ ಬಾರಿ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಇವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿಯ ಯುವ ಬ್ಯಾಟ್ಸ್​ಮನ್​ ಡೆಲ್ಲಿ ಕ್ಯಾಪಿಟಲ್​ ಜೊತಗೆ ನಡೆದ ಇನ್ಸ್ಟಾಗ್ರಾಮ್ ಲೈವ್​ ಸಂವಾದದಲ್ಲಿ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧೋನಿ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ರಿಷಭ್​ ಪಂತ್​ ತಿಳಿಸಿದ್ದಾರೆ. "ಧೋನಿ ನನಗೆ ಮಾರ್ಗದರ್ಶಕರಿದ್ದಂತೆ. ಅವರು ನನಗೆ ಮೈದಾನದೊಳಗೆ ಹಾಗು ಹೊರಗೆ ಸಹಾಯ ಮಾಡಿದ್ದಾರೆ. ನನಗೆ ಗೊಂದಲವಿರುವ ಕೆಲವು ವಿಚಾರಗಳನ್ನು ಅರ್ಥಮಾಡಿಸಿಕೊಡಲು ಅವರು ಪ್ರಯತ್ನಿಸುತ್ತಾರೆ. ಆದರೆ ಅವರ ಮೇಲೆ ಅವಲಂಬಿತನಾಗದಿರಲು ಪ್ರಯತ್ನಿಸುತ್ತಿದ್ದೇನೆ"ಎಂದಿದ್ದಾರೆ.

ಇನ್ನು ಧೋನಿ ತಮ್ಮ ಮೆಂಟರ್​ ಮಾತ್ರವಲ್ಲದೆ ನನ್ನ ಫೇವರೇಟ್​ ಬ್ಯಾಟಿಂಗ್ ಪಾರ್ಟ್ನರ್​ ಕೂಡ ಆಗಿದ್ದಾರೆ. ನಾವು ಜೊತೆಯಾಗಿ ಬ್ಯಾಟಿಂಗ್​ ನಡೆಸಲು ಕೆಲವು ಅವಕಾಶಗಳು ಸಿಕ್ಕಿವೆ. ಮಹಿ ಬಾಯ್​ ಇದ್ದರೆ, ಎಲ್ಲವೂ ವಿಂಗಡಿಸಲ್ಪಟ್ಟಿರುತ್ತವೆ. ನೀವು ಅದನ್ನು ಅನುಸರಿಸಿದರೆ ಸಾಕು ಎಂದು ಪಂತ್​​ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ರೋಹಿತ್​, ವಿರಾಟ್​ರಂತಹ ಹಿರಿಯ ಆಟಗಾರರ ಜೊತೆ ಬ್ಯಾಟಿಂಗ್​ ನಡೆಸಿದರೆ, ಅದೊಂದು ವಿಶೇಷ ಅನುಭವ ಸಿಗುತ್ತದೆ. ಅವರಿಂದ ಕೆಲವು ಮಾರ್ಗದರ್ಶನ ಪಡೆಯಬಹುದು ಎಂದು 22 ವರ್ಷದ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ತಿಳಿಸಿದ್ದಾರೆ.

ಧೋನಿ ಉತ್ತರಾಧಿಕಾರಿ ಎಂದೇ ಕರೆಸಿಕೊಂಡಿದ್ದ ರಿಷಭ್ ಪಂತ್​ ಆರಂಭದಲ್ಲಿ ಅಬ್ಬರಿಸಿದರಾದರೂ ನಂತರ ಸಿಕ್ಕ ಹೆಚ್ಚಿನ ಅವಕಾಶಗಳನ್ನು ವ್ಯರ್ಥ ಮಾಡಿದರು. ಇವರ ವೈಫಲ್ಯದಿಂದ ಟೀಮ್​ ಮ್ಯಾನೇಜ್​ಮೆಂಟ್​ ರಾಹುಲ್​ರನ್ನು ಅನಿವಾರ್ಯವಾಗಿ ವಿಕೆಟ್​ ಕೀಪಿಂಗ್​ಗೆ ಆಯ್ಕೆ ಮಾಡಿದೆ.

ಆದರೆ ಯುವ ಆಟಗಾರನ ಬೆಂಬಲಕ್ಕೆ ನಿಂತಿರುವ ರೋಹಿತ್​, ರೈನಾ ಅವರಂತಹ ಅನುಭವಿ ಆಟಗಾರರು, ಪಂತ್​ ಇನ್ನು 20-21ರ ಯುವ ಆಟಗಾರ. ಆತನ ಮೇಲೆ ಒತ್ತಡ ಏರುವುದು ಬೇಡ. ಆತನ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೆಚ್ಚಿನ ಅವಕಾಶ ನೀಡಿದರೆ ಮುಂದೊಂದು ದಿನ ಯುವರಾಜ್ -ಸೆಹ್ವಾಗ್​ರಂತಹ ಬ್ಯಾಟ್ಸ್​ಮನ್​ ಆಗಲಿದ್ದಾರೆ ಎಂದು ಹೇಳಿದ್ದರು.

ABOUT THE AUTHOR

...view details