ಚೆನ್ನೈ:ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್‌ನಲ್ಲಿ ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ತಂಡ ಹೊಂದಿದೆ. ನಿನ್ನೆ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅದು ಸಂಪೂರ್ಣ ಪ್ರದರ್ಶನವಾಗಿದೆ ಎಂದು ಕೆಕೆಆರ್ ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ ನಿತೀಶ್ ರಾಣಾ ಮತ್ತು ರಾಹುಲ್ ತ್ರಿಫಾಠಿ ಸ್ಫೋಟಕ ಅರ್ಧ ಶತಕ ಸಿಡಿಸಿದರು. ರಾಣಾ 56 ಎಸೆತಗಳಲ್ಲಿ 80 ರನ್ಗಳಿಸಿದರೆ, ತ್ರಿಪಾಠಿ 29 ಎಸೆತಗಳಲ್ಲಿ 53 ರನ್ ಸಿಡಿಸಿದರು. ಇವರಿಬ್ಬರ 104 ರನ್ಗಳ ಜೊತೆಯಾಟದಿಂದ ಕೆಕೆಆರ್ 15 ಓವರ್ಗಳಿಗೆ 145 ರನ್ಗಳಿಸಿತ್ತು. ನಂತರ ದಿಢೀರ್ ಕುಸಿತ ಕಂಡರೂ ಉಪನಾಯಕ ಕಾರ್ತಿಕ್ ಅವರ 22 ತ್ವರಿತ ರನ್ಗಳ ನೆರವಿನಿಂದ ನಿಧಾನಗತಿಯ ಪಿಚ್ನಲ್ಲೂ 187ರನ್ಗಳಿಸಲು ಕೆಕೆಆರ್ ಸಫಲವಾಗಿತ್ತು.
ಈ ಕುರಿತು ಪಂದ್ಯದ ನಂತರ ಮಾತನಾಡಿದ ನಾಯಕ ಮಾರ್ಗನ್, "ನಮ್ಮ ತಂಡದಲ್ಲಿ ಅನೇಕ ಸಾಮರ್ಥ್ಯವುಳ್ಳ ಆಟಗಾರರನ್ನು ಹೊಂದಿದ್ದೇವೆ, ಅದರ ಜೊತೆಗೆ ಆರಂಭಿಕರಾಗಿ ತವರಿನ ಇಬ್ಬರು ಅತ್ಯುತ್ತಮ ಯುವ ಆಟಗಾರರ ಕೂಡ ಇದ್ದಾರೆ. ಜೊತೆಗೆ ತ್ರಿಪಾಠಿ 3ನೇ ಕ್ರಮಾಂಕದಲ್ಲಿ ಸುಂದರವಾಗಿ ಆಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಮ್ಮದು ಅತ್ಯಂತ ಬಲಿಷ್ಠ ತಂಡವಾಗಿದೆ.
ನಿನ್ನೆ ದಿನೇಶ್ ಕಾರ್ತಿಕ್ ಆಡಿದ ರೀತಿ ಮತ್ತು ರಸೆಲ್ ಆಡಬಹುದಾದ ಆಟವನ್ನು ಆಡಿದಾಗ , ಐಪಿಎಲ್‌ನಲ್ಲಿ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಅತ್ಯಂತ ವಿನಾಶಕಾರಿ ಬ್ಯಾಟಿಂಗ್ ಘಟಕವನ್ನು ನೀವು ಕೆಕೆಆರ್ ತಂಡದಲ್ಲಿ ನೋಡಲಿದ್ದೀರಿ ಎಂದು 10ರನ್ಗಳಿಂದ ಸನ್ ರೈಸರ್ಸ್ ತಂಡವನ್ನು ಮಣಿಸಿದ ನಂತರ ಮಾರ್ಗನ್ ತಿಳಿಸಿದ್ದಾರೆ.
ಆಕರ್ಷಕ 80 ರನ್ಗಳಿಸಿದ ರಾಣಾ ಇನ್ನಿಂಗ್ಸ್ ಮ್ಯಾಚ್ ವಿನ್ನಿಂಗ್ ಆಟ ಎಂದು ಮಾರ್ಗನ್ ಬಣ್ಣಿಸಿದ್ದಾರೆ. " ನಿತೀಶ್ ರಾಣಾ ಅವರ ಮ್ಯಾಚ್ ವಿನ್ನಿಂಗ್ಸ್ ಆಟವನ್ನು ನೋಡಿ ನನಗೆ ಖುಷಿಯಾಗಿದೆ. ಅವರ ಆಟ ಮತ್ತು ಅವರ ಕೌಶಲ್ಯ ನನ್ನನ್ನು ಆಕರ್ಷಿಸಿದೆ. ಅತ್ಯಂತ ಆಕ್ರಮಣಕಾರಿಯಾಗಿ ಆಡಿದರು, ಅವರ ಆಟದಿಂದ ತಂಡ ಉತ್ತಮ ಸ್ಥಿತಿ ತಲುಪಿತ್ತು" ಎಂದು ಮಾರ್ಗನ್ ಯುವ ಆಟಗಾರನನ್ನು ಗುಣಗಾನ ಮಾಡಿದ್ದಾರೆ.
6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಮತ್ತು ಬ್ಯಾಟಿಂಗ್ನಲ್ಲಿ ವಿಫಲವಾದರೂ ಕೊನೆಯ ಎರಡು ಓವರ್ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಆ್ಯಂಡ್ರೆ ರಸೆಲ್ರ ಪ್ರದರ್ಶನವನ್ನು ಕೂಡ ಮಾರ್ಗನ್ ನೆನೆದಿದ್ದು, ಇಂತಹ ಸಾಮರ್ಥ್ಯವುಳ್ಳ ಆಟಗಾರರು ದೀರ್ಘ ಸಮಯದಿಂದ ತಂಡದಲ್ಲಿರುವುದು ಖುಷಿ ವಿಚಾರ ಎಂದಿದ್ದಾರೆ.
ಇದನ್ನು ಓದಿ: IPL-2021: ಸನ್‌ರೈಸರ್ಸ್ ಮೇಲೆ ಸವಾರಿ ಮಾಡಿದ ನೈಟ್ ರೈಡರ್ಸ್