ಫ್ಲೋರಿಡಾ :ಭಾರತ ತಂಡದ ಅನುಭವಿ ವಿಕೆಟ್ ಕೀಪರ್ ಅನುಪಸ್ಥಿತಿಯಲ್ಲಿ ಆಯ್ಕೆಯಾಗಿರುವ ವಿಕೆಟ್ ಕೀಪರ್ ರಿಷಭ್ ಪಂತ್ಗೆ ವಿಂಡೀಸ್ ಸರಣಿ ಅದ್ಭುತ ಅವಕಾಶ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡಕ್ಕೆ ಕಳೆದ ಒಂದು ದಶಕದಿಂದ ಎಂಎಸ್ ಧೋನಿ ಪಾತ್ರ ನಿರ್ಣಾಯಕವಾಗಿತ್ತು. ಇದೀಗ ಧೋನಿ ಅನುಪಸ್ಥಿತಿಯಲ್ಲಿ ಟಿ20 ಚಾಂಪಿಯನ್ ವಿಂಡೀಸ್ ವಿರುದ್ಧ ಇಂದು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ದೆಹಲಿಯ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಪಂದ್ಯಕ್ಕೂ ಮುನ್ನ ನಡೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿರುವ ಕೊಹ್ಲಿ, ಪಂತ್ಗೆ ಅವರ ಸಾಮರ್ಥ್ಯ ತೋರಿಸಲು ಈ ಸರಣಿ ಅದ್ಭುತ ಅವಕಾಶವಾಗಿದೆ. ಭಾರತ ತಂಡಕ್ಕೆ ಅವರ ಸೇವೆ ಪ್ರಮುಖವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಉತ್ತಮ ಲಯವನ್ನು ಕಂಡುಕೊಳ್ಳಬೇಕಿದೆ. ಇದನ್ನು ನಾವು ರಿಷಭ್ರಿಂದ ಭಯಸುತ್ತಿದ್ದೇವೆ.
2018ರ ಐಪಿಎಲ್ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ರಿಷಭ್ ಪಂತ್, ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮ ಪದರ್ಶನ ನೀಡುವಲ್ಲಿ ವಿಫಲರಾಗಿದ್ದರು. ನಂತರ 2019ರ ಐಪಿಎಲ್ನಲ್ಲಿ 448 ರನ್ಗಳಿಸಿ ಗೇಮ್ ಫಿನಿಶರ್ ಆಗಿ ಮಿಂಚಿದ್ದರು. ಇದೀಗ ಅವರ ಪಾತ್ರ ಭಾರತ ತಂಡಕ್ಕೆ ನಿರ್ಣಾಯಕವಾಗಿದೆ.