ನವದೆಹಲಿ:ವಿಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ರನ್ನು ವಿಂಡೀಸ್ ಆಯ್ಕೆ ಸಮಿತಿ ಭಾರತದ ವಿರುದ್ಧದ ಸರಣಿಗೆ ಆಯ್ಕೆ ಮಾಡುವ ಮೂಲಕ ಏಕದಿನ ಕ್ರಿಕೆಟ್ ವಿದಾಯಕ್ಕೆ ವೇದಿಕೆ ಸಿದ್ದ ಮಾಡಿಕೊಟ್ಟಿದೆ.
ವಿಶ್ವಕಪ್ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುತ್ತೇನೆ ಎಂದು ಹೇಳಿದ್ದ ಕ್ರಿಸ್ ಗೇಲ್ ನಂತರ ತಮ್ಮ ನಿರ್ಧಾರ ಬದಲಿಸಿಕೊಂಡು, ತವರಿನಲ್ಲಿ ನಡೆಯುವ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿವೃತ್ತಿ ಪಡೆಯಲಿದ್ದೇನೆ ಎಂದಿದ್ದರು. ಆದರೆ, ಭಾರತದ ವಿರುದ್ಧ ಕಳೆದ ವಾರ ಪ್ರಕಟಗೊಂಡ ಟಿ-20 ತಂಡದಲ್ಲಿ ಗೇಲ್ರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿರಲಿಲ್ಲ. ಇದೀಗ ಏಕದಿನ ಸರಣಿಯಲ್ಲಿ ಆಯ್ಕೆ ಮಾಡಿದ್ದು ಗೇಲ್ಗೆ ಏಕದಿನ ಕ್ರಿಕೆಟ್ನಲ್ಲೂ ವಿದಾಯ ಪಂದ್ಯ ಆಡುವ ಸೌಭಾಗ್ಯವನ್ನು ವಿಂಡೀಸ್ ಆಯ್ಕೆ ಸಮಿತಿ ಒದಗಿಸಿಕೊಟ್ಟಿದೆ.
ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ನಲ್ಲಿ 10,393 ರನ್ಗಳಿಸಿದ್ದು, ಇನ್ನು 12 ರನ್ಗಳಿಸಿದರೆ ಏಕದಿನ ಕ್ರಿಕೆಟ್ನಲ್ಲಿ ವಿಂಡೀಸ್ ಪರ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎನಿಸಲಿದ್ದಾರೆ. 10,405 ರನ್ಗಳಿಸಿರುವ ಬ್ರಿಯಾನ್ ಲಾರ ಮೊದಲ ಸ್ಥಾನದಲ್ಲಿದ್ದಾರೆ.
ಗೇಲ್ ಜೊತೆಗೆ ವಿಶ್ವಕಪ್ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್ ಹಾಗೂ ಕೀಮೊ ಪಾಲ್ ತಂಡ ಸೇರ್ಪಡೆಕೊಂಡಿದ್ದಾರೆ.
ಭಾರತದ ವಿರುದ್ಧ ಕಣಕ್ಕಿಳಿಯಲಿರುವ ಏಕದಿನ ತಂಡ
ಜೇಸನ್ ಹೋಲ್ಡರ್ (ನಾಯಕ), ಇವಿನ್ ಲೂಯಿಸ್, ಕ್ರಿಸ್ ಗೇಲ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್ (ವಿಕೆಟ್‌ಕೀಪರ್),ನಿಕೋಲಸ್ ಪೂರನ್, ಫ್ಯಾಬಿಯಾನ್ ಅಲೆನ್, ಕಾರ್ಲೋಸ್ ಬ್ರಾಥ್‌ವೇಟ್, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್ ಕೀಮೊ ಪಾಲ್, ಕೇಮರ್ ರೋಚ್, ಒಶೇನ್ ಥಾಮಸ್