ಲಂಡನ್:ಇಂಗ್ಲೆಂಡ್ ವಿರುದ್ಧ ನಡೆಯುವ ೩ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ಆಟಗಾರರು ‘ ಬ್ಲಾಕ್ ಲೈವ್ ಮ್ಯಾಟರ್’ ಲೋಗೋ ಇರುವ ಜರ್ಸಿ ತೊಟ್ಟು ಆಡಲಿದ್ದಾರೆ. ಸಮಾನತೆ ಮತ್ತು ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ.
“ಒಗ್ಗಟ್ಟು ಪ್ರದರ್ಶಿಸುವುದು ಮತ್ತ ವರ್ಣಭೇದದ ವಿರುದ್ದ ಜಾಗೃತಿ ಮೂಡಿಸುವು ನಮ್ಮ ಕರ್ತವ್ಯ ಎಂದು ನಾವು ಭಾವಿಸಿದ್ದೇವೆ ” ಎಂದು ವಿಂಡೀಸ್ ನಾಯಕ ಜಾಸನ್ ಹೋಲ್ಡರ್ ತಿಳಿಸಿದ್ದಾರೆ.
ಕ್ರೀಡೆಗಳ ಪುನಾರಂಭದ ನಂತರ ಎಲ್ಲ 20 ಪ್ರೀಮಿಯರ್ ಲೀಗ್ ಫುಟ್ಬಾಲ್ ಕ್ಲಬ್‌ಗಳು ಬ್ಲಾಕ್ ಲೈವ್ ಮ್ಯಾಟರ್ ಲೋಗೊ ಇರುವ ಶರ್ಟ್‌ಗಳಲ್ಲಿ ಧರಿಸಿದ ಬೆನ್ನಲ್ಲೇ ಐಸಿಸಿ ಕ್ರಿಕೆಟ್ ನಲ್ಲೂ ಬಳಸಲು ಅನುಮತಿ ನೀಡಿದೆ.