ಕರ್ನಾಟಕ

karnataka

ETV Bharat / sports

ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​​: ಬಾಂಗ್ಲಾದೇಶ ಲೆಜೆಂಡ್ಸ್ ಮಣಿಸಿದ ವೆಸ್ಟ್​ ಇಂಡೀಸ್​ ಲೆಜೆಂಡ್ಸ್​ - ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್ ಸುದ್ದಿ

ಬಾಂಗ್ಲಾದೇಶ ಲೆಜೆಂಡ್ಸ್​ ಮಣಿಸಿ ವೆಸ್ಟ್​ ಇಂಡೀಸ್​ ಲೆಜೆಂಡ್ಸ್​ ರೋಡ್​ ಸೇಫ್ಟ್​ ವರ್ಲ್ಡ್​ ಸಿರೀಸ್​ನಲ್ಲಿ ತನ್ನ ಮೊದಲ ಜಯದ ಖಾತೆ ತೆರೆದಿದೆ.

West Indies Legends beat Bangladesh  Road saftey world series  West Indies legends vs Bangaldesh legends  Brian Lara  ಬಾಂಗ್ಲಾದೇಶ ಲೆಜೆಂಡ್ಸ್​ರನ್ನು ಮಣಿಸಿದ ವೆಸ್ಟ್​ ಇಂಡೀಸ್​ ಲೆಜೆಂಡ್ಸ್  ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್  ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್ ಸುದ್ದಿ  ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್ 2021
ಬಾಂಗ್ಲಾದೇಶ ಲೆಜೆಂಡ್ಸ್​ರನ್ನು ಮಣಿಸಿದ ವೆಸ್ಟ್​ ಇಂಡೀಸ್​ ಲೆಜೆಂಡ್ಸ್​

By

Published : Mar 13, 2021, 12:10 PM IST

ರಾಯಪುರ( ಛತ್ತೀಸ್​ಗಢ): ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಲೆಜೆಂಡ್ಸ್ ವಿರುದ್ಧ ವೆಸ್ಟ್ ಇಂಡೀಸ್ ಲೆಜೆಂಡ್ಸ್​ ಐದು ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ. ಇನ್ನು ವೆಸ್ಟ್​ ಇಂಡೀಸ್​ಗೆ ರೋಡ್​ ಸೇಫ್ಟಿ ವಿಶ್ವ ಸರಣಿಯಲ್ಲಿ ಇದು ಮೊದಲ ಜಯವಾಗಿದೆ.

ಟಾಸ್​ ಗೆದ್ದ ವೆಸ್ಟ್​ ಇಂಡೀಸ್​ ಮೊದಲ ಬಾಂಗ್ಲಾದೇಶವನ್ನು ಕಣಕ್ಕಿಳಿಸಿತು. ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ನಿಗದಿತ 20 ಓವರ್​ಗೆ 7 ವಿಕೆಟ್ಗಳನ್ನು ಕಳೆದುಕೊಂಡು 169 ರನ್​ಗಳನ್ನು ಕಲೆ ಹಾಕಿತು.

ವಿಂಡೀಸ್​ ಪರ ಎಸ್​.ಬೆನ್​ ಮೂರು ವಿಕೆಟ್​ಗಳನ್ನು ಪಡೆದರೆ, ಆರ್​. ಅಸ್ಟಿನ್​ 2 ವಿಕೆಟ್​ಗಳು ಮತ್ತು ಬೆಸ್ಟ್​ ಒಂದು ವಿಕೆಟ್​ನ್ನು ಪಡೆದು ತಂಡಕ್ಕೆ ನೆರವಾದರು.

ಬಾಂಗ್ಲಾ ನೀಡಿದ ಟಾರ್ಗೇಟ್ ಅ​ನ್ನು ಬೆನ್ನಟ್ಟಿದ ವಿಂಡೀಸ್​ ಕೊಂಚ ಆರಂಭಿಕ ಆಘಾತ ಎದುರಿಸಿತು. ಕಿರ್ಡ್ ಎಡ್ವರ್ಡ್ಸ್, ವಿಂಡೀಸ್ ನಾಯಕ ಬ್ರಿಯಾನ್ ಲಾರಾ ಮತ್ತು ರಿಡ್ಲೆ ಜೇಕಬ್ಸ್ ಆಟದಿಂದ ವಿಂಡೀಸ್​ ಗೆಲುವಿನ ದಡ ಸೇರಿತು.

ಬಾಂಗ್ಲಾದೇಶದ ಪರ ಅಬ್ದುಲ್​ ರಜಾಕ್​ ಎರಡು ವಿಕೆಟ್​ಗಳನ್ನು ಪಡೆದ್ರೆ, ಮೊಹಮ್ಮದ್​ ರಫಿಕ್​ ಮತ್ತು ಮುಸ್ತಿಫಿಕರ್​ ರೆಹಮಾನ್​ ತಲಾ ಒಂದೊಂದು ವಿಕೆಟ್​ ವಿಕೆಟ್​ ಪಡೆದಿದ್ದಾರೆ.

ಮಾರ್ಚ್​ 16 ರಂದು ವೆಸ್​ ಇಂಡೀಸ್​ ಲೆಜೆಂಡ್ಸ್​ ಇಂಗ್ಲೆಂಡ್​ ಲೆಜೆಂಡ್ಸ್​ನ್ನು ಎದುರಿಸಲಿದೆ. ಪಾಯಿಂಟ್​ ಟೆಬಲ್ಸ್​ನಲ್ಲಿ ಇಂಡಿಯಾ ಲೆಜೆಂಡ್ಸ್​ ದ್ವಿತೀಯ ಸ್ಥಾನದಲ್ಲಿದ್ದು, ಶ್ರೀಲಂಕಾ ಲೆಜೆಂಡ್ಸ್​ ಮೊದಲ ಸ್ಥಾನವನ್ನು ಅಲಂಕರಿಸಿದೆ.

ABOUT THE AUTHOR

...view details