ಕರ್ನಾಟಕ

karnataka

ETV Bharat / sports

ವೆಸ್ಟ್ ಇಂಡೀಸ್ vs ಶ್ರೀಲಂಕಾ 2nd ODI : ಲೂಯಿಸ್​, ಶೈ ಹೋಪ್ ಆರ್ಭಟಕ್ಕೆ ಲಯ ಕಳೆದುಕೊಂಡ ಲಂಕಾ - ಇವಿನ್ ಲೂಯಿಸ್

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲವು ಸಾಧಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.

West Indies down Sri Lanka by 5 wickets in 2nd ODI to take unbeaten lead
ವೆಸ್ಟ್ ಇಂಡೀಸ್ vs ಶ್ರೀಲಂಕಾ 2nd odi

By

Published : Mar 13, 2021, 12:29 PM IST

ನಾರ್ತ್ ಪಾಯಿಂಟ್ (ಆಂಟಿಗುವಾ) : ಇವಿನ್ ಲೂಯಿಸ್ ಮತ್ತು ಶೈ ಹೋಪ್ ಅದ್ಭುತ ಜೊತೆಯಾಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್​ಗಳ ಭರ್ಜರಿ ಗೆಲವು ಸಾಧಿಸಿದೆ. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ 2-0 ದಿಂದ ಮುನ್ನಡೆ ಸಾಧಿಸಿದೆ.

ಟಾಸ್​ ಸೋತು ಬ್ಯಾಟಿಂಗ್​ಗೆ​ ಇಳಿದ ಲಂಕಾ, ಆರಂಭದಲ್ಲೇ ಕ್ಯಾಪ್ಟನ್ ಕರುಣರತ್ನೇ (1) ವಿಕೆಟ್​​ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತು. ತಂಡದ ಪರ ಭರ್ಜರಿ ಬ್ಯಾಟಿಂಗ್​ ನಡೆಸಿದ ಗುಣತೀಲಕ್ 96 ಬಾಲ್​ಗಳಲ್ಲಿ 10 ಬೌಂಡರಿ 3 ಸಿಕ್ಸರ್​ ನೆರವಿನಿಂದ 96 ರನ್​ಗಳಿಸಿದರು. ಇನ್ನೂ ಮದ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ​ವಿಕೆಟ್​ ಕೀಪರ್​ ಚಂಡಿಮಲ್ 98 ಬಾಲ್​ಗಳಲ್ಲಿ 3 ಬೌಂಡರಿ 2 ಸಿಕ್ಸರ್​ ನೇರವಿನಿಂದ 71 ರನ್​ಗಳಿಸಿದರು. ಅತಂಮವಾಗಿ ಶ್ರೀಲಂಕಾ ತಂಡ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 273 ರನ್​ಗಳಿಸಿತು. ವಿಂಡೀಸ್​ ಪರ ಜೇಸನ್ ಮೊಹಮ್ಮದ್ 3/47, ಹಾಗೂ ಜೋಶಫ್​ 2/42 ವಿಕೆಟ್​ ಪಡೆದು ಮಿಂಚಿದರು.

ಓದಿ : ರೋಡ್​ ಸೇಫ್ಟಿ ವರ್ಲ್ಡ್​ ಸಿರೀಸ್​​: ಬಾಂಗ್ಲಾದೇಶ ಲೆಜೆಂಡ್ಸ್ ಮಣಿಸಿದ ವೆಸ್ಟ್​ ಇಂಡೀಸ್​ ಲೆಜೆಂಡ್ಸ್​

ಈ ಸ್ಪರ್ಧಾತ್ಮಕ ಮೊತ್ತವನ್ನ ಬೆನ್ನಟ್ಟಿದ ವಿಂಡೀಸ್​​ ತಂಡಕ್ಕೆ ಉತ್ತಮ ಆರಂಭ ದೊರಕಿತು. ವೆಸ್ಟ್ ಇಂಡೀಸ್ ಓಪನರ್​ ಲೂಯಿಸ್ ಮತ್ತು ಶೈ ಹೋಪ್ ಮೊದಲನೇ ವಿಕೆಟ್​ ಗೆ 192 ರನ್​ಗಳ ಜೋತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಇವಿನ್ ಲೂಯಿಸ್ 121 ಬಾಲ್​ಗಳಲ್ಲಿ 8 ಬೌಂಡರಿ 4 ಸಿಕ್ಸರ್​ ನೇರವಿನಿಂದ 103 ರನ್​ಗಳಿಸಿದರೆ, ಶೈ ಹೋಪ್ 108 ಬಾಲ್​ಗಳಲ್ಲಿ 6 ಬೌಂಡರಿ​ ನೇರವಿನಿಂದ 84 ರನ್​ಗಳಿಸಿದರು. ವೆಸ್ಟ್ ಇಂಡೀಸ್ ತಂಡ 49.4 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 274 ರನ್​ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿತು. ಇನ್ನೂ ಲಂಕಾ ಪರ ಪ್ರದೀಪ್​ ಹಾಗೂ ಪೇರಾರ ತಲಾ 2 ವಿಕೆಟ್​ ಪಡೆದರು.

ABOUT THE AUTHOR

...view details