ಲಂಡನ್:ಇಂಗ್ಲೆಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನಾಲ್ಕು ದಿನಗಳ ಪಂದ್ಯ ಪರಿಗಣಿಸಬೇಕೆಂದು ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ವಿಂಡೀಸ್ ತಂಡಕ್ಕೆ ಕಿವಿಮಾತು ಹೇಳಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ 5 ದಿನ ಆಡುವಂತಹ ಸಾಮರ್ಥ್ಯವನ್ನು ತಂಡ ಹೊಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ನಿಂದ ದೀರ್ಘ ವಿರಾಮದ ನಂತರ ಸೌತಂಪ್ಟನ್ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಬಯೋಸೆಕ್ಯೂರ್ ತಾಣದಲ್ಲಿ ಜುಲೈ 8ರಿಂದ ಆರಂಭವಾಗುವ ಮೂಲಕ ವಿಶ್ವ ಕ್ರಿಕೆಟ್ಗೆ ಮರುಚಾಲನೆ ಸಿಗುತ್ತಿದೆ.
ಅವರು (ವಿಂಡೀಸ್) ತಕ್ಷಣವೇ ಪುಟಿದೇಳಲು ಸಮರ್ಥರಾಗಬೇಕು. ಏಕೆಂದರೆ ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ. ಅವರು ಅವರ ನೆಲದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದ್ದಾರೆ ಎಂದು ಲಾರಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.