ಹೈದರಾಬಾದ್: ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಆಟಗಾರರೊಂದಿಗೆ ಲಿಫ್ಟ್ ಒಳಗೆ ಪ್ರವೇಶಿಸಲು ಭಾರತೀಯ ಆಟಗಾರರಿಗೆ ಅವಕಾಶ ನೀಡಲಿಲ್ಲ ಎಂದು ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.
ಭಾರತದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರೊಂದಿಗೆ ಮಾತುಕತೆ ನಡೆಸಿರುವ ವಿಡಿಯೋವನ್ನು ಆರ್.ಅಶ್ವಿನ್ ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. "ನಾವು ಸಿಡ್ನಿಗೆ ತಲುಪಿದ ನಂತರ ಅವರು ನಮ್ಮನ್ನು ತೀವ್ರ ನಿರ್ಬಂಧಗಳಿಂದ ಬಂಧಿಸಿದರು. ಸಿಡ್ನಿಯಲ್ಲಿ ಒಂದು ವಿಶಿಷ್ಟವಾದ ಘಟನೆ ನಡೆದಿತ್ತು. ಇದು ನಿಜಕ್ಕೂ ವಿಚಿತ್ರವಾದದ್ದು. ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಒಂದೇ ಬಯೋ ಬಬಲ್ನಲ್ಲಿ ಇದ್ದೆವು. ಆದರೆ ಆಸ್ಟ್ರೇಲಿಯಾದ ಆಟಗಾರರು ಲಿಫ್ಟ್‌ನಲ್ಲಿದ್ದಾಗ ಅದರೊಳಗೆ ಭಾರತೀಯ ಆಟಗಾರರನ್ನು ಅನುಮತಿಸುತ್ತಿರಲಿಲ್ಲ"ಎಂದಿದ್ದಾರೆ.