ಕರ್ನಾಟಕ

karnataka

ETV Bharat / sports

ವೆಲ್ಲಿಂಗ್ಟನ್ ಟೆಸ್ಟ್​ನಲ್ಲಿ ಮುಗ್ಗರಿಸಿದ ಕೊಹ್ಲಿ ಪಡೆ: 10 ವಿಕೆಟ್​ಗಳ ಜಯ ಸಾಧಿಸಿದ ಕಿವೀಸ್​ - ಭಾರತ ಕ್ರಿಕೆಟ್​ ತಂಡದ ನ್ಯೂಜಿಲೆಂಡ್​ ಪ್ರವಾಸ

ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್​ ಅಂತರದ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಕಿವೀಸ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Wellington test
ಕಿವೀಸ್

By

Published : Feb 24, 2020, 6:29 AM IST

Updated : Feb 24, 2020, 6:57 AM IST

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 10 ವಿಕೆಟ್​ ಅಂತರದ ಸೋಲು ಕಂಡಿದೆ.

ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್​ ಕಳೆದುಕೊಂಡು 144 ರನ್​ ಗಳಿಸಿತ್ತು. ನಾಲ್ಕನೇ ದಿನದಾಟದಲ್ಲಿ 39 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಮುಂದುವರೆಸಿದ ಭಾರತ ಕೆಲ ಓವರ್​ಗಳಲ್ಲೇ ಆಲೌಟ್ (191/10)​ ಆದ ಕಾರಣ ಕೇವಲ 8 ರನ್​ಗಳ ಲೀಡ್​ ಪಡೆಯಿತು. ಮೂರನೇ ದಿನದ ಅಂತ್ಯಕ್ಕೆ ಕ್ರೀಸ್​ನಲ್ಲಿದ್ದ ಅಜಿಂಕ್ಯ ರಹಾನೆ (29) ಹಾಗೂ ಹನುಮ ವಿಹಾರಿ (15) ಇಂದು ಬೇಗ ಔಟ್​ ಆದರು. ಬಳಿಕ ರಿಷಬ್​ ಪಂತ್​ 25 ರನ್​ ಬಾರಿಸಿದ್ದರಿಂದ ಮುನ್ನಡೆ ಸಾಧಿಸಲು ಸಾಧ್ಯವಾಯಿತು. ಇನ್ನುಳಿದಂತೆ ಆರ್​. ಅಶ್ವಿನ್​ 4, ಇಶಾಂತ್​ ಶರ್ಮಾ 12, ಮೊಹಮದ್ ಶಮಿ 2* ಹಾಗೂ ಜಸ್ಪ್ರೀಪ್​ ಬುಮ್ರಾ ಶೂನ್ಯಕ್ಕೆ ಔಟ್​ ಆದರು. ನ್ಯೂಜಿಲೆಂಡ್​ ಪರ ಟಿಮ್​ ಸೌಥಿ 5, ಟ್ರೆಂಟ್​ ಬೌಲ್ಟ್​ 4 ಹಾಗೂ ಗ್ರಾಂಡೋಮ್​ 1 ವಿಕೆಟ್​ ಪಡೆದರು.

ಬಳಿಕ ಗೆಲುವಿಗೆ ಅಗತ್ಯವಿದ್ದ 9 ರನ್​ಗಳನ್ನು ವಿಕೆಟ್​ ನಷ್ಟವಿಲ್ಲದೆ ಬಾರಿಸಿದ ಕಿವೀಸ್​ ಗೆಲುವಿನ ಕೇಕೆ ಹಾಕಿತು. ಅಲ್ಲದೆ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಈ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ್ದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 165 ರನ್​ಗಳಿಗೆ ಆಲೌಟ್​ ಆಗಿತ್ತು. ಬಳಿಕ ನ್ಯೂಜಿಲೆಂಡ್​ 348 ರನ್​ಗಳಿಸಿ ಎಲ್ಲ ವಿಕೆಟ್​ ಕಳೆದುಕೊಂಡಿತ್ತಲ್ಲದೆ, 183 ರನ್​ಗಳ ಮುನ್ನಡೆ ಸಾಧಿಸಿತ್ತು. ಬಳಿಕ ಎರಡನೇ ಇನ್ನಿಂಗ್ಸ್​ನಲ್ಲೂ ವೈಫಲ್ಯ ಅನುಭವಿಸಿದ ಕೊಹ್ಲಿ ಪಡೆ 191 ರನ್​ಗೆ ಸರ್ವಪತನ ಕಂಡು ಮೊದಲ ಟೆಸ್ಟ್​ ಪಂದ್ಯದಲ್ಲಿ 10 ವಿಕೆಟ್​ಗಳಿಂದ ಮುಖಭಂಗ ಅನುಭವಿಸಿದೆ.

ಟೆಸ್ಟ್​ ಚಾಂಪಿಯನ್​ಷಿಪ್​ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಕೊಹ್ಲಿ ಪಡೆಗೆ ಇದು ಮೊದಲ ಸೋಲಾಗಿದೆ. ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಫೆ.28ರಿಂದ ಆರಂಭಗೊಳ್ಳಲಿದ್ದು, ಸರಣಿ ಸೋಲು ತಪ್ಪಿಸಿಕೊಳ್ಳಲು ಭಾರತಕ್ಕೆ ಗೆಲುವು ಅನಿವಾರ್ಯವಾಗಿದೆ.

Last Updated : Feb 24, 2020, 6:57 AM IST

ABOUT THE AUTHOR

...view details