ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾ ತಂಡಕ್ಕೆ ಟಿ-20 ಸರಣಿಯಲ್ಲಿ ಕಠಿಣ ಸವಾಲು ನೀಡಲು ಸಜ್ಜಾದ ಸಂಘಟಿತ ವಿರಾಟ್​ ಪಡೆ - ಕೆಎಲ್ ರಾಹುಲ್

1-2ರಲ್ಲಿ ಕೊಹ್ಲಿ ಬಳಗ 50 ಓವರ್​ಗಳ ಸರಣಿ ಕಳೆದುಕೊಂಡಿದೆ. ಸುದೀರ್ಘ ಸಮಯದ ನಂತರ ಏಕದಿನ ಕ್ರಿಕೆಟ್​ಗೆ ಮರಳಿದ್ದೂ ಹಾಗೂ 2 ತಿಂಗಳ ಕಾಲ ಐಪಿಎಲ್​ನಲ್ಲಿ ಆಡಿದ್ದರಿಂದ ಏಕದಿನ ಕ್ರಿಕೆಟ್​ಗೆ ಪರಿವರ್ತನೆಗೊಳ್ಳಲು ಭಾರತೀಯ ಆಟಗಾರರು ವಿಫಲರಾಗಿದ್ದರು. ಆದರೆ, ಟಿ-20ಯಲ್ಲಿ ಮಾತ್ರ ತಂಡದಲ್ಲಿರುವ ಬಹುಪಾಲು ಆಟಗಾರರು ಪ್ರಚಂಡ ಫಾರ್ಮ್​ನಲ್ಲಿರುವುದರಿಂದ ಆಸ್ಟ್ರೇಲಿಯಾಗೆ ಕಠಿಣ ಸವಾಲು ಎದುರಾಗಲಿದೆ.

ಆಸ್ಟ್ರೇಲಿಯಾ vs ಭಾರತ ಟಿ20 ಸರಣಿ
ಆಸ್ಟ್ರೇಲಿಯಾ vs ಭಾರತ ಟಿ20 ಸರಣಿ

By

Published : Dec 3, 2020, 4:35 PM IST

ಕ್ಯಾನ್ಬೆರಾ: ಏಕದಿನ ಸರಣಿಯಲ್ಲಿ ಕೊನೆಯ ಪಂದ್ಯ ಗೆದ್ದಿರುವ ವಿಶ್ವಾಸದಲ್ಲಿರುವ ಭಾರತ ತಂಡ ಶುಕ್ರವಾರ ನಡೆಯಲಿರುವ ಟಿ-20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಕಠಿಣ ಪೈಪೋಟಿ ನೀಡಲು ಸಜ್ಜಾಗಿದೆ. ಈಗಾಗಲೇ ಕೊನೆ ಏಕದಿನ ಪಂದ್ಯದಲ್ಲಿ ಎಲ್ಲ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿರುವ ಟೀಮ್​ ಇಂಡಿಯಾದಲ್ಲಿ ನಾಳಿನ ಪಂದ್ಯಕ್ಕೆ ಸಾಕಷ್ಟು ಆಯ್ಕೆಗಳು ತೆರೆದು ಕೊಂಡಿವೆ.

1-2ರಲ್ಲಿ ಕೊಹ್ಲಿ ಬಳಗ 50 ಓವರ್​ಗಳ ಸರಣಿಯನ್ನು ಕಳೆದುಕೊಂಡಿದೆ. ಸುದೀರ್ಘ ಸಮಯದ ನಂತರ ಏಕದಿನ ಕ್ರಿಕೆಟ್​ಗೆ ಮರಳಿದ್ದು, 2 ತಿಂಗಳ ಕಾಲ ಐಪಿಎಲ್​ನಲ್ಲಿ ಆಡಿದ್ದರಿಂದ ಏಕದಿನ ಕ್ರಿಕೆಟ್​ಗೆ ಪರಿವರ್ತನೆಗೊಳ್ಳಲು ಭಾರತೀಯ ಆಟಗಾರರು ವಿಫಲರಾಗಿದ್ದರು. ಆದರೆ, ಟಿ-20ಯಲ್ಲಿ ಮಾತ್ರ ತಂಡದಲ್ಲಿರುವ ಬಹುಪಾಲು ಆಟಗಾರರು ಪ್ರಚಂಡ ಫಾರ್ಮ್​ನಲ್ಲಿರುವುದರಿಂದ ಆಸ್ಟ್ರೇಲಿಯಾಗೆ ಕಠಿಣ ಸವಾಲು ಎದುರಾಗಲಿದೆ.

ಹಾರ್ದಿಕ್ ಪಾಂಡ್ಯ

ಕೊರೊನಾದಿಂದ ಕ್ರಿಕೆಟ್ ಸ್ಥಗಿತಗೊಳ್ಳುವ ಮೊದಲು ಭಾರತ ತಂಡ ನ್ಯೂಜಿಲ್ಯಾಂಡ್ ನೆಲದಲ್ಲಿ 5 ಪಂದ್ಯಗಳ ಟಿ-20 ಸರಣಿಯನ್ನು 5-0ಯಲ್ಲಿ ಕ್ಲೀನ್​ಸ್ವೀಪ್ ಮಾಡಿತ್ತು. ಈ ಸರಣಿಯಿಂದ ಭಾರತ ತಂಡ ಸಾಕಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲಿದೆ.

ಇನ್ನು ಶುಕ್ರವಾರದಿಂದ ಆರಂಭವಾಗಲಿರುವ ಸರಣಿಯಲ್ಲಿ ವಾಷಿಂಗ್ಟನ್​ ಸುಂದರ್​, ದೀಪಕ್​ ಚಹಾರ್​ ಹಾಗೂ ಟಿ ನಟರಾಜನ್​ ಟಿ-20 ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಹಾಗಾಗಿ ತಂಡದ ಸಮತೋಲನ ಕೂಡ ಸಾಧ್ಯವಾಗಲಿದೆ. ಸುಂದರ್​ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆರ್​ಸಿಬಿ ನಾಯಕರಾಗಿದ್ದ ಕೊಹ್ಲಿ ಅವರನ್ನು ಪವರ್​ ಪ್ಲೇನಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು. ಬೌಲರ್​ಗಳು ವಿಫಲರಾದರೆ ಆಲ್​ರೌಂಡರ್​ ಪಾಂಡ್ಯ ಅವರನ್ನು ಕೂಡ ಒಂದೆರೆಡು ಓವರ್​ಗಳಲ್ಲಿ ಬಳಿಸಿಕೊಳ್ಳಲು ಕೊಹ್ಲಿಗೆ ಅವಕಾಶವಿದೆ.

ಟಿ20 ಸರಣಿಯ ವಿಶ್ಲೇಷಣೆ

ಇದನ್ನೂ ಓದಿ: ವಿಂಡೀಸ್‌​ ವಿರುದ್ಧ ಟೆಸ್ಟ್​ನ ಮೊದಲ ದಿನವೇ ದಾಖಲೆ ಬರೆದ ವಿಲಿಯಮ್ಸನ್

ಯಾರ್ಕರ್ ಸ್ಪೆಷಲಿಸ್ಟ್​ ಟಿ. ನಟರಾಜನ್​ ತಂಡಕ್ಕೆ ಹೆಚ್ಚುವರಿ ಬೋನಸ್​ ಆಗಿದ್ದಾರೆ. ಏಕದಿನ ತಂಡದ ಡೆಬ್ಯೂಟ್​ನಲ್ಲೇ ಗಮನ ಸೆಳೆದಿರುವ ಅವರು ಟಿ-20ಗೂ ಪದಾರ್ಪಣೆ ಮಾಡಿದರೆ ಅಚ್ಚರಿಯಿಲ್ಲ. ಆದರೆ ಶಮಿ ಮತ್ತು ಚಹಾರ್​ ನಡುವೆ ಕೊಹ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎನ್ನುವುದೇ ಆಸಕ್ತಿದಾಯಕ ವಿಚಾರವಾಗಿದೆ. ಇನ್ನು ಏಕದಿನ ಸರಣಿಯಲ್ಲಿ ಮರೆಯಾಗದ ವೈಫಲ್ಯ ಅನುಭವಿಸಿರುವ ಚಹಾಲ್​ ಕೂಡ ಟಿ-20 ಸರಣಿಯಲ್ಲಿ ಬೌನ್ಸ್​ಬ್ಯಾಕ್ ಮಾಡಲು ಕಾತುರದಿಂದಿದ್ದಾರೆ.

ಆ್ಯರೋನ್ ಫಿಂಚ್

ಇನ್ನು ನ್ಯೂಜಿಲ್ಯಾಂಡ್​ ಸರಣಿಯಲ್ಲಿ ಆರಂಭಿಕರಾಗಿ ಮಿಂಚಿದ್ದ ಕೆಎಲ್ ರಾಹುಲ್​ ಇಂದಿನ ಸರಣಿಯಲ್ಲೂ ಆರಂಭಿಕನಾಗಿ ಧವನ್ ಜೊತೆ ಕಣಕ್ಕಿಳಿಯಲಿದ್ದಾರೆ. ಐಪಿಎಲ್​ನಲ್ಲಿ ರಾಹುಲ್ ಆರೆಂಜ್​ ಕ್ಯಾಪ್​ ಪಡೆದಿದ್ದರು. ಇನ್ನು ಕೊಹ್ಲಿ, ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿದ್ದಾರೆ. ಏಕದಿನ ಸರಣಿಯಲ್ಲಿ ತೋರಿದ ಪ್ರದರ್ಶನವನ್ನು ತಾವೂ ಮುಂದುವರಿಸಲು ಕಾಯುತ್ತಿದ್ದಾರೆ. ಆದರೆ, 4ನೇ ಕ್ರಮಾಂಕದಲ್ಲಿ ಶ್ರೇಯಸ್​ ಅಯ್ಯರ್​ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೂ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾಗಿದ್ದರು. ಆದರೆ, ಐಪಿಎಲ್​ನಲ್ಲಿ 4ನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಿರುವುದು ಕೂಡ ಇಲ್ಲಿ ಸ್ಮರಿಸಬಹುದು.

ಇನ್ನು ಆಸ್ಟ್ರೇಲಿಯಾ ಏಕದಿನ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದ ವಾರ್ನರ್​ ಸೇವೆ ಕಳೆದುಕೊಳ್ಳಲಿದೆ. ಇದೀಗ ಅವರ ಸ್ಥಾನಕ್ಕೆ ಲಾಬುಶೇನ್ ಅಥವಾ ಸ್ಟೋಯ್ನಿಸ್​ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು. ಆದರೆ ಈ ಬಗ್ಗೆ ಖಚಿತವಿಲ್ಲ. ಇನ್ನು ಕೊನೆಯ ಏಕದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಕಮ್ಮಿನ್ಸ್​ ಮತ್ತು ಸ್ಟಾರ್ಕ್​ ಮತ್ತೆ ಶುಕ್ರವಾರ ಮರಳುವ ಸಾಧ್ಯತೆಯಿದೆ.

ABOUT THE AUTHOR

...view details