ಕರ್ನಾಟಕ

karnataka

ETV Bharat / sports

ಸನ್​ರೈಸರ್ಸ್​ ವಿರುದ್ಧ ಸೋಲು: ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಹೊರಹಾಕಿದ ಎಬಿಡಿ! - ಎಬಿ ಡಿವಿಲಿಯರ್ಸ್​ ಮಾತು

ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲು ಕಂಡಿರುವ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ.

AB de Villiers
AB de Villiers

By

Published : Nov 1, 2020, 4:46 AM IST

ಶಾರ್ಜಾ:ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ಹೊರತುಪಡಿಸಿ ಯಾವುದೇ ತಂಡ ಪ್ಲೇ-ಆಫ್​​ ಹಂತಕ್ಕೆ ತಲುಪಿಲ್ಲ. ಮೂರು ಪಂದ್ಯಗಳಲ್ಲಿ ಒಂದು ಗೆದ್ದು ಸುಲಭವಾಗಿ ಮುಂದಿನ ಹಂತಕ್ಕೆ ಹೋಗುವ ಇರಾದೆಯಲ್ಲಿದ್ದ ಆರ್​ಸಿಬಿ ಕೂಡ ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ.

ಮುಂಬೈ ಹಾಗೂ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಸೋಲು ಕಂಡಿರುವ ಆರ್​ಸಿಬಿ ಸದ್ಯ ಪಾಯಿಂಟ್​ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ನೆಟ್​​ ರನ್​ರೇಟ್ ಮಾತ್ರ -0.145 ಆಗಿರುವ ಕಾರಣ ಮುಂದಿನ ಪಂದ್ಯದಲ್ಲಿ ಅದಕ್ಕೆ ಗೆಲುವು ಅನಿವಾರ್ಯವಾಗಿದೆ.

ಸುದ್ದಿಗೋಷ್ಠಿಯಲ್ಲಿ ಎಬಿಡಿ ಭಾಗಿ

ಸನ್​ರೈಸರ್ಸ್ ವಿರುದ್ಧ ಸೋಲು ಕಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಎಬಿ ಡಿವಿಲಿಯರ್ಸ್​ ಮಾತನಾಡಿದ್ದರು. ದೆಹಲಿ ವಿರುದ್ಧದ ಆಟ ದೊಡ್ಡದಾಗಿದ್ದು, ಅಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಆ ದಿನ ನಾವು ಅತ್ಯುತ್ತಮ ಕ್ರಿಕೆಟ್​ನೊಂದಿಗೆ ಕಮ್​ಬ್ಯಾಕ್​ ಮಾಡಬೇಕಾಗಿದ್ದು, ಹಾಗೇ ಮಾಡಿದರೆ ಮಾತ್ರ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಬ್ಯಾಟಿಂಗ್​ ವಿಭಾಗದಲ್ಲಿ ನಾವು ಮೇಲಿಂದ ಮೇಲೆ ಮಾಡುತ್ತಿರುವ ತಪ್ಪುಗಳಿಂದ ಸೋಲುವಂತಾಗಿದ್ದು, ಮುಂದಿನ ಪಂದ್ಯದಲ್ಲಿ ನಾವು ಮಾಡಿರುವ ತಪ್ಪು ತಿದ್ದಿಕೊಳ್ಳಬೇಕು ಎಂದು ತಿಳಿಸಿದರು.

ABOUT THE AUTHOR

...view details