ಮೆಲ್ಬೋರ್ನ್:ಗಾಯದಿಂದ ನೊಂದು ಬಲಿಷ್ಠವಲ್ಲದ ಭಾರತ ತಂಡದೆದುರು ಸರಣಿ ಸೋಲು ಕಂಡಿರುವುದಕ್ಕೆ ತವರಿನ ತಂಡವನ್ನು ಮೈಕಲ್ ಕ್ಲಾರ್ಕ್ ಟೀಕಿಸಿದ್ದಾರೆ. ಆಸೀಸ್ ಗೆಲುವಿಗಾಗಿ ಆಕ್ರಮಣಕಾರಿಯಾಗಿ ಆಡುವ ಬದಲು ಸೋಲಿನ ಭಯದಿಂದ ಆಡಿದ್ದೇ ಸರಣಿ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ಹೇಳಿದ್ದಾರೆ.
ಮಂಗಳವಾರ ಗಾಯದ ಹೊಡೆತದಿಂದ ಸರಣಿಯುದ್ದಕ್ಕೂ ನೊಂದಿದ್ದ ಭಾರತ ತಂಡ ಕೊನೆಯ ಪಂದ್ಯವನ್ನು 2-1ರಲ್ಲಿ ಗೆಲ್ಲುವ ಮೂಲಕ ಬಾರ್ಡರ್ ಗವಾಸ್ಕರ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಆಸೀಸ್ ಮಾಜಿ ನಾಯಕ ಕ್ಲಾರ್ಕ್ ತವರಿನಲ್ಲಿ ಸರಣಿ ಸೋಲು ಕಂಡಿರುವುದಕ್ಕೆ ನಾಯಕ ಟೀಮ್ ಪೇನ್ರನ್ನು ಹೊಣೆ ಮಾಡುವುದನ್ನು ತಿರಸ್ಕರಿಸಿದ್ದಾರೆ.
ಸರಣಿಯುದ್ದಕ್ಕೂ ನಾವು ಕೆಲವು ಹಂತಗಳಲ್ಲಿ ತುಂಬಾ ಋಣಾತ್ಮಕವಾಗಿದ್ದೆವು. ಆಕ್ರಮಣಕಾರಿಯಾಗಿ ಆಡಿ ಪಂದ್ಯ ಗೆಲ್ಲುವ ಬದಲು ಸೋಲುತ್ತೇವೆ ಎಂಬ ಭಾವನೆಯೇ ಹೆಚ್ಚಾಗಿತ್ತು ಎಂದು ಕ್ಲಾರ್ಕ್ ಸ್ಪೋರ್ಟ್ಸ್ ವೆಬ್ಸೈಟ್ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.