ದಾವೋಸ್:ನಾನು ಕ್ರಿಕೆಟಿಗನಾಗಿದ್ದಾಗ ಪಾಕಿಸ್ತಾನ, ಭಾರತದ ಮೇಲೆ ಪಾಬಲ್ಯ ಸಾಧಿಸಿತ್ತು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಶೃಂಗಸಭೆಯಲ್ಲಿ ಹೇಳಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ಅನ್ನು ದೇಶದ ಅಭಿವೃದ್ಧಿ ಜೊತೆ ಹೋಲಿಸಿ ಮಾತನಾಡಿದ್ದಾರೆ.
60ರ ದಶಕದಲ್ಲಿ, ಪಾಕಿಸ್ತಾನವು ಉನ್ನತಿಯಲ್ಲಿತ್ತು. ಏಷ್ಯಾದ ಇತರೆ ರಾಷ್ಟ್ರಗಳಿಗೆ ಪಾಕಿಸ್ತಾನ ಆದರ್ಶಪ್ರಾಯವಾಗಿತ್ತು. ನಾನು ಆ ಭರವಸೆಯೊಂದಿಗೆ ಬೆಳೆದಿದ್ದೇನೆ. ಆದರೆ ದುರದೃಷ್ಟವಶಾತ್ ಪ್ರಜಾಪ್ರಭುತ್ವವು ಪಾಕಿಸ್ತಾನದಲ್ಲಿ ನೆಲೆಗೊಳ್ಳಲು ಸಾಧ್ಯವಾಗದ ಕಾರಣ ನಾವು ಬೆಳವಣಿಗೆ ಕಾಣಲು ಸಾಧ್ಯವಾಗಲಿಲ್ಲ. ಪ್ರಜಾಪ್ರಭುತ್ವ ಕುಂಠಿತಗೊಂಡಾಗ, ಸೈನ್ಯ ಅಧಿಕಾರಕ್ಕೆ ಬಂತು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.