ನವದೆಹಲಿ :ಭಾರತ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ಕಾರ್ಪೊರೇಟ್ ಸಂಸ್ಥೆಗಳು ಪ್ರಾಯೋಜಕತ್ವದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಶೇ.70ಕ್ಕಿಂತ ಹೆಚ್ಚಿನ ಆರ್ಥಿಕತೆ ಹರಿದು ಬರುತ್ತದೆ. ಹೀಗಾಗಿ, ವಿಶ್ವ ಕ್ರಿಕೆಟ್ಗೆ ಭಾರತ ನೀಡಿರುವ ಕೊಡುಗೆಯನ್ನು ಕಡಿಮೆ ಎಂದು ಅಂದಾಜು ಮಾಡಬಾರದು ಅಂತಾ ಐಸಿಸಿಯ ನೂತನ ಅಧ್ಯಕ್ಷ ಗ್ರೆಗ್ ಜಾನ್ ಬಾರ್ಕ್ಲೆ ಹೇಳಿದರು.
ಭಾರತ ಕ್ರಿಕೆಟ್ ತಂಡವು ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚು ಆದಾಯ ತಂದು ಕೊಡಬಲ್ಲ ಪ್ರಮುಖ ತಂಡಗಳಲ್ಲಿ ಒಂದಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಾರಂಭಿಸಿದ 'ಬಿಗ್ ತ್ರೀ' ಪರಿಕಲ್ಪನೆಗೆ ಚಂದಾದಾರಾಗುವುದಿಲ್ಲ ಎಂದರು.
ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಮೂರು ಶಕ್ತಿಶಾಲಿ ದೇಶಗಳನ್ನು ಪರಿಗಣಿಸಬೇಕು ಎಂಬ ವ್ಯವಸ್ಥೆಯನ್ನು 2014ರಲ್ಲಿ ಜಾರಿಗೆ ತರಲಾಗಿದೆ. ಅವುಗಳನ್ನು ಕೆಲವು ವರ್ಷಗಳ ಹಿಂದೆಯೇ ಆ ನಿಯಮದಿಂದ ಹಿಂದಕ್ಕೆ ತರಲಾಯಿತು. ಪ್ರಾಯೋಜಕತ್ವ ವಿತರಣೆ ಅಡಿ ಎಲ್ಲರಿಗಿಂತ ಆಸ್ಟ್ರೇಲಿಯಾ, ಇಂಗ್ಲೆಂಡ್ ಕೂಡ ಅದೇ ಪ್ರಮಾಣದ ವ್ಯವಹಾರ ತಂದುಕೊಡುತ್ತವೆ ಎಂದು ಬಾರ್ಕ್ಲೆ ವರ್ಚುವಲ್ ಮೀಡಿಯಾ ಸಂವಾದದಲ್ಲಿ ಹೇಳಿದರು.