ಕರ್ನಾಟಕ

karnataka

ಪಾಕಿಸ್ತಾನ ಉಳಿಯಲು ಭಾರತದ ಸಹಾಯ ಬೇಕಿಲ್ಲ: ಪಿಸಿಬಿ ಅಧ್ಯಕ್ಷ ಎಹ್ಸಾನ್​ ಮಣಿ ಕಿಡಿ

By

Published : Apr 15, 2020, 12:35 PM IST

ಭಾರತದ ಸಹಾಯವಿಲ್ಲದೇ ಪಾಕಿಸ್ತಾನ ಕ್ರಿಕೆಟ್​ ಉಳಿಯಬಲ್ಲದು, ನಮ್ಮೊಂದಿಗೆ ಆಡುತ್ತೇವೆಂದು ಹಲವು ಬಾರಿ ಮಾತುಕೊಟ್ಟು ತಪ್ಪಿದ್ದಾರೆ. ಇದೀಗ ನಾವು ಭಾರತವನ್ನು ಬಿಟ್ಟು ಯೋಜನೆ ರೂಪಿಸಿಕೊಳ್ಳುತ್ತೇವೆ ಎಂದು ಪಿಸಿಬಿ ಅಧ್ವಕ್ಷ ತಿಳಿಸಿದ್ದಾರೆ.

ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮನಿ
ಭಾರತ-ಪಾಕಿಸ್ತಾನ

ಲಾಹೋರ್​(ಪಾಕಿಸ್ತಾನ):ಪಾಕಿಸ್ತಾನದ ಉಳಿವಿಗೆ ಭಾರತದ ನೆರವು ನಮಗೆ ಅಗತ್ಯವಿಲ್ಲ ಎಂದು ಪಿಸಿಬಿ ಮುಖ್ಯಸ್ಥ ಎಹ್ಸಾನ್ ಮಣಿ ಹೇಳಿಕೆ ನೀಡಿದ್ದಾರೆ.

ವಿಶ್ವದೆಲ್ಲೆಡೆ ಕೊರೊನಾ ದಾಳಿಯಿಂದ ತತ್ತರಿಸಿದ್ದು, ಇದರ ವಿರುದ್ಧ ಹೋರಾಡುವುದಕ್ಕೆ ದೇಣಿಗೆ ಸಂಗ್ರಹಿಸಲು ಭಾರತ -ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಡಬೇಕೆಂದು ಪಾಕ್​ ಆಟಗಾರ ಅಖ್ತರ್​ ಕೇಳಿಕೊಂಡಿದ್ದರು. ಇದಕ್ಕೆ ಭಾರತೀಯ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್​, ಸುನಿಲ್​ ಗವಾಸ್ಕರ್​ ಅವರಿಂದ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಣಿ, ನಾವು ನಷ್ಟ ಅನುಭವಿಸಿದ್ದೇವೆ., ಆದರೆ ಅವರು (ಭಾರತ) ನಮ್ಮ ಆಲೋಚನೆ ಅಥವಾ ಯೋಜನೆಯಲ್ಲಿಲ್ಲ. ನಾವು ಅವರಿಲ್ಲದೆ ಬದುಕುತ್ತೇವೆ. ಅವರಿಲ್ಲದೇ ನಾವು ಉಳಿಯುತ್ತೇವೆ ಎಂದು ಪಿಸಿಬಿಯ ಮಾಧ್ಯಮ ವಿಭಾಗ ತಿಳಿಸಿದೆ.

ಭಾರತಕ್ಕೆ ನಮ್ಮ ಜೊತೆ ಆಡುವುದು ಬೇಕಾಗಿಲ್ಲ. ಹೀಗಾಗಿ ನಾವು ಅವರನ್ನು ಬಿಟ್ಟು ಯೋಜನೆ ರೂಪಿಸಬೇಕಿದೆ. ಈಗಾಗಲೆ ಒಂದೆರೆಡು ಬಾರಿ ಅವರು ನಮ್ಮೊಂದಿಗೆ ಆಡುವುದಾಗಿ ಮಾತುಕೊಟ್ಟು ಕೊನೆಯ ಗಳಿಗೆಯಲ್ಲಿ ಮಾತು ತಪ್ಪಿದ್ದಾರೆ.

ಸಧ್ಯಕ್ಕೆ ನಾವು ಐಸಿಸಿ ಟೂರ್ನಮೆಂಟ್​ ಹಾಗೂ ಏಷ್ಯಾಕಪ್​ನಲ್ಲಿ ಅವರ ಜೊತೆ ಆಡುತ್ತಿದ್ದೇವೆ. ನಮಗೆ ಅದಷ್ಟೇ ಸಾಕು ಏಕೆಂದರೆ ನಮಗೆ ಕ್ರಿಕೆಟ್​ ಆಡಲು ಆಸಕ್ತಿಯಿದೆ. ನಮಗೆ ಕ್ರಿಕೆಟ್ ರಾಜಕೀಯದಿಂದ ಹೊರಗಿಡುವುದು ಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಶ್ಚರ್ಯವೆಂದರೆ ಭಾರತದ ಮಾಜಿ ಕ್ರಿಕೆಟರ್​ ಸುನಿಲ್​ ಗವಾಸ್ಕರ್​ ನಿನ್ನೆಯಷ್ಟೇ, ಭಾರತ - ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯವುದು ಎಂಬ ನಿರೀಕ್ಷೆಗಿಂತ ಲಾಹೋರ್​ನಲ್ಲಿ ಹಿಮ ಬೀಳಬಹುದು ಎಂಬ ನಿರೀಕ್ಷೆಯೇ ಹೆಚ್ಚಾಗಿದೆ ಎಂದು ಪಾಕ್​ನ ಮಾಜಿ ಕ್ರಿಕೆಟಿಗ ರಮೀಜ್​ ರಾಜಾ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ತಮಾಷೆ ಮಾಡಿದ್ದರು.

ABOUT THE AUTHOR

...view details