ಕರ್ನಾಟಕ

karnataka

ETV Bharat / sports

ಧೋನಿ ನಾಯಕತ್ವದಲ್ಲಿ ನಮಗೆ ಒತ್ತಡ ಇರಲ್ಲ.. ಡ್ವೇನ್​ ಬ್ರಾವೋ

ಸಿಎಸ್​ಕೆ ಉತ್ತರಾಧಿಕಾರಿಯ ಬಗ್ಗೆ ಧೋನಿ ಅಭಿಪ್ರಾಯವೇನಾಗಿರಬಹುದು ಎಂದು ಕೇಳಿದ್ದಕ್ಕೆ, ಧೋನಿ ಈಗಾಗಲೇ ತಮ್ಮ ನಂತರದ ಸಿಎಸ್​ಕೆ ನಾಯಕನನ್ನು ಗುರುತಿಸಿರುತ್ತಾರೆ ಎಂದು ನನಗೆ ತಿಳಿದಿದೆ. ಎಲ್ಲರೂ ಒಂದಲ್ಲ ಒಂದು ಸಮಯ ತಂಡದಿಂದ ಹೊರ ಹೋಗಬೇಕು. ನನ್ನ ಪ್ರಕಾರ ರೈನಾ ಅಥವಾ ಯುವ ಆಟಗಾರ ಯಾರಾದರೂ ನಾಯಕತ್ವ ವಹಿಸಿಕೊಳ್ಳಬಹುದು..

ಧೋನಿ ನಾಯಕತ್ವ
ಧೋನಿ ನಾಯಕತ್ವ

By

Published : Sep 6, 2020, 7:27 PM IST

ನವದೆಹಲಿ :ಎಂಎಸ್​ ಧೋನಿ ನಾಯಕನಾಗಿರುವುದರಿಂದ ನಮ್ಮ ತಂಡ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಲ್​ರೌಂಡರ್​ ಡ್ವೇನ್​ ಬ್ರಾವೋ ತಿಳಿಸಿದ್ದಾರೆ. ಧೋನಿ ನಾಯಕನಾಗಿ ಭಾರತ ತಂಡವನ್ನು ಪರಿವರ್ತನೆ ಮಾಡಿದಂತೆ ಸಿಎಸ್​ಕೆ ತಂಡದ ಪರಿವರ್ತನೆಗೂ ಕಾರಣವಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎಂಎಸ್​ ಧೋನಿ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಸಚಿನ್, ದ್ರಾವಿಡ್,​ ಸೌರವ್ ಗಂಗೂಲಿ ಹಾಗೂ ಅನಿಲ್​ ಕುಂಬ್ಳೆ ಅವರಿದ್ದ ತಂಡದಿಂದ ವಿರಾಟ್​ ಮತ್ತು ರೋಹಿತ್ ಒಳಗೊಂಡ ಈಗಿನ ನಂಬರ್​ ಒನ್​ ಟೀಂ ಆಗುವವರೆಗೂ ತಂಡ ಕಟ್ಟಿದ ಕೀರ್ತಿ ಧೋನಿಗೆ ಸಲ್ಲುತ್ತದೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರುವುದರಿಂದ ಅವರಿಗೆ ಮೊದಲಿದ್ದ ಒತ್ತಡ ಸಿಎಸ್​ಕೆ ತಂಡದಲ್ಲಿ ಇರಲ್ಲ. ಆದರೆ, ಧೋನಿಯ ನಾಯಕತ್ವ ಸ್ವಭಾವದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಬ್ರಾವೋ ಅಭಿಪ್ರಾಯಪಟ್ಟಿದ್ದಾರೆ.

ಸಿಎಸ್​ಕೆ ಉತ್ತರಾಧಿಕಾರಿಯ ಬಗ್ಗೆ ಧೋನಿ ಅಭಿಪ್ರಾಯವೇನಾಗಿರಬಹುದು ಎಂದು ಕೇಳಿದ್ದಕ್ಕೆ, ಧೋನಿ ಈಗಾಗಲೇ ತಮ್ಮ ನಂತರದ ಸಿಎಸ್​ಕೆ ನಾಯಕನನ್ನು ಗುರುತಿಸಿರುತ್ತಾರೆ ಎಂದು ನನಗೆ ತಿಳಿದಿದೆ. ಎಲ್ಲರೂ ಒಂದಲ್ಲ ಒಂದು ಸಮಯ ತಂಡದಿಂದ ಹೊರ ಹೋಗಬೇಕು. ನನ್ನ ಪ್ರಕಾರ ರೈನಾ ಅಥವಾ ಯುವ ಆಟಗಾರ ಯಾರಾದರೂ ನಾಯಕತ್ವ ವಹಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ತಂಡದ ಬಗ್ಗೆ ಮಾತನಾಡಿರುವ ಅವರು, ಸಿಎಸ್​ಕೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ. ಅದು ಮುಂಬೈ, ಡೆಲ್ಲಿ ಅಥವಾ ಬೆಂಗಳೂರು ಎಲ್ಲಾದರೂ ಆಡಿದರೂ ತಂಡಕ್ಕೆ ಸಾಕಷ್ಟು ಬೆಂಬಲ ನೀಡುವುದನ್ನ ನಾನು ನೋಡಿದ್ದೇನೆ. ತಂಡ ಅತ್ಯುತ್ತಮ ಅನುಭವವುಳ್ಳ ಆಟಗಾರರಿಂದ ಕೂಡಿದೆ. ಮಾಲೀಕರಿಂದಲೂ ಯಾವುದೇ ರೀತಿಯ ಒತ್ತಡ ಇಲ್ಲ. ಧೋನಿ ನಾಯಕತ್ವ ಇರುವುದರಿಂದ ನಮಗೆ ಒತ್ತಡವಿರುವುದಿಲ್ಲ. ಹಾಗಾಗಿ, ಐಪಿಎಲ್​ ಇತಿಹಾಸದಲ್ಲಿ ಸಿಎಸ್​ಕೆ ಅತ್ಯಂತ ಯಶಸ್ವಿ ತಂಡವಾಗಿದೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details