ಕರ್ನಾಟಕ

karnataka

By

Published : Oct 31, 2019, 7:55 PM IST

Updated : Oct 31, 2019, 8:08 PM IST

ETV Bharat / sports

ಕೊನೆ ಕ್ಷಣದಲ್ಲಿ ಪಂದ್ಯ ರದ್ದು ಅಸಾಧ್ಯ, ಜೇಟ್ಲಿ ಮೈದಾನದಲ್ಲೇ ಟಿ-20 ಪಂದ್ಯ: ಗಂಗೂಲಿ  ಸ್ಪಷ್ಟನೆ

ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟಿ-20 ಪಂದ್ಯ ಪೂರ್ವನಿಗದಿಯಂತೆ ಅರುಣ್​ ಜೇಟ್ಲಿ ಮೈದಾನದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ರು.

ಸೌರವ್​ ಗಂಗೂಲಿ,ಬಿಸಿಸಿಐ ಅಧ್ಯಕ್ಷ

ನವದೆಹಲಿ:ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸಂಪೂರ್ಣವಾಗಿ ಕುಸಿದ ಪರಿಣಾಮ ನವೆಂಬರ್​ 3ರಂದು ಭಾರತ-ಬಾಂಗ್ಲಾ ನಡುವೆ ನಡೆಯುವ ಮೊದಲ ಟಿ-20 ಪಂದ್ಯದ ನಡೆಯೋದು ಕಷ್ಟ ಎಂದೇ ಹೇಳಲಾಗಿತ್ತು. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಯಾವುದೇ ಕಾರಣಕ್ಕೂ ಪಂದ್ಯವನ್ನು ಬೇರೆಡೆ ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದೆರಡು ದಿನಗಳಿಂದ ನಾವು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ರೂಪುಗೊಂಡಿರುವ ಯೋಜನೆ​ ಪ್ರಕಾರವೇ ಮ್ಯಾಚ್‌ ನಡೆಯುತ್ತೆ. ಕೊನೆ ಕ್ಷಣದಲ್ಲಿ ಪಂದ್ಯ ರದ್ದು​ ಮಾಡಿ ಬೇರೊಂದು ಸ್ಥಳದಲ್ಲಿ ಆಯೋಜನೆ​ ಮಾಡಲು ಸಾಧ್ಯವಿಲ್ಲ ಎಂದು ಗಂಗೂಲಿ ಸ್ಪಷ್ಟನೆ ಕೊಟ್ಟರು.

ದೀಪಾವಳಿ ಮುಕ್ತಾಯಗೊಳ್ತಿದ್ದಂತೆ ಉತ್ತರ ಭಾರತದಲ್ಲಿ ಚಳಿಗಾಲ ಆರಂಭಗೊಳ್ಳುವುದರಿಂದ ಸಾಕಷ್ಟು ಹೊಗೆ ಮತ್ತು ಧೂಳು ಆವರಿಸಲು ಶುರುವಾಗುತ್ತದೆ. ಆದರೆ ಇದರ ನಿಯಂತ್ರಣಕ್ಕೆ ಎಲ್ಲ ರೀತಿಯ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ರು. ಈಗಾಗಲೇ ನಾನು ಮೈದಾನದ ಸಿಬ್ಬಂದಿಯೊಂದಿಗೆ ಈ ಬಗ್ಗೆ ಮಾತನಾಡಿದ್ದು, ಸೂರ್ಯನ ಕಿರಣ ಸರಿಯಾಗಿ ಬೀಳಲು ಶುರುವಾಗ್ತಿದ್ದಂತೆ ಎಲ್ಲವೂ ಸರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೋಹಿತ್​ ಶರ್ಮಾ ಸ್ಪಷ್ಟನೆ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಹಂಗಾಮಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಸಹ ಮಾತನಾಡಿದ್ದು, ತಾವು ಇದೀಗ ಮೈದಾನಕ್ಕೆ ಆಗಮಿಸಿರುವ ಕಾರಣ ಹೆಚ್ಚು ಸಮಯ ಹೊರಗಡೆ ಕಳೆಯಲು ಆಗಿಲ್ಲ. ನವೆಂಬರ್​ 3ರಂದು ನಡೆಯುವ ಪಂದ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಈ ಹಿಂದೆ ಶ್ರೀಲಂಕಾ ವಿರುದ್ಧ ಸಹ ನಾವು ಇದೇ ಸ್ಥಿತಿಯಲ್ಲಿ ಟೆಸ್ಟ್​ ಪಂದ್ಯ ಆಡಿದ್ದೇವೆ ಎಂದು ತಿಳಿಸಿದ್ದಾರೆ.

Last Updated : Oct 31, 2019, 8:08 PM IST

ABOUT THE AUTHOR

...view details