ಕರ್ನಾಟಕ

karnataka

ETV Bharat / sports

ಬಂತಾ ಧೋನಿ ನಿವೃತ್ತಿ ಸಮಯ? ಪಂತ್​ಗೆ ಮಾತ್ರ ಅವಕಾಶ ಎಂದ ಎಂಎಸ್​ಕೆ ಪ್ರಸಾದ್

ವಿಶ್ವಕಪ್ ಟೂರ್ನಿ ನಂತರ ಯುವಕರಿಗೆ ಅವಕಾಶ ನೀಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಹೀಗಾಗಿ ಧೋನಿಯ ಆಯ್ಕೆ ಸಾಧ್ಯವಿಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ.ಪ್ರಸಾದ್​ ಪರೋಕ್ಷ ಹೇಳಿಕೆ ಮೂಲಕ ಸುಳಿವು ಸಹ ಕೊಟ್ಟಿದ್ದಾರೆ.

ಎಂಎಸ್​ಕೆ ಪ್ರಸಾದ್, ಆಯ್ಕೆ ಸಮಿತಿ ಅಧ್ಯಕ್ಷ

By

Published : Oct 24, 2019, 8:24 PM IST

ಮುಂಬೈ:ಟೀಂ ಇಂಡಿಯಾದಲ್ಲಿ ನಮ್ಮ ಆಯ್ಕೆ ಏನಿದ್ದರೂ ರಿಷಭ್ ಪಂತ್ ಮಾತ್ರ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಟಿ-20 ಮತ್ತು ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಟಿ-20 ಸರಣಿಯಿಂದ ಮಹೇಂದ್ರ ಸಿಂಗ್ ಧೋನಿ ಅವರನ್ನ ಕೈ ಬಿಡಲಾಗಿದೆ. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್, ನಮ್ಮ ಆಯ್ಕೆ ಏನಿದ್ದರೂ ರಿಷಭ್ ಪಂತ್ ಮಾತ್ರ ಎಂದಿದ್ದಾರೆ.

ಎಂಎಸ್​ಕೆ ಪ್ರಸಾದ್, ಆಯ್ಕೆ ಸಮಿತಿ ಅಧ್ಯಕ್ಷ

ವಿಶ್ವಕಪ್ ಟೂರ್ನಿ ನಂತರ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ತೀರ್ಮಾನ ನೀಡಿದ್ದೆವು. ಹೀಗಾಗಿ ಪಂತ್​ಗೆ ಅವಕಾಶ ನೀಡಲಾಗಿದೆ. ಪಂತ್ ಉತ್ತಮ ಪ್ರದರ್ಶನ ನೀಡದಿರಬಹುದು ಆದ್ರೆ, ಒಬ್ಬರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಅವನು ಉತ್ತಮ ಆಟಗಾರ ಆಗುತ್ತಾನೆ ಆದ್ದರಿಂದ ರಿಷಭ್ ಪಂತ್​ಗೆ ಅವಕಾಶ ನೀಡಲಾಗುತ್ತಿದೆ.

ಬಾಂಗ್ಲಾ ವಿರುದ್ಧದ ಸರಣಿಗೆ ಸಂಜು ಸ್ಯಾಮ್ಸನ್​ಗೂ ಅವಕಾಶ ನೀಡಲಾಗಿದೆ. ನಿಮಗೆ ನಮ್ಮ ಯೋಜನೆ ಏನೆಂಬುದು ಅರ್ಥವಾಗಿದೆ ಎಂದುಕೊಳ್ಳುತ್ತೇನೆ ಎಂದಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಧೋನಿ ಆಯ್ಕೆ ಸಾಧ್ಯವಿಲ್ಲ ಎಂದು ಪ್ರಸಾದ್ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details