ಕರ್ನಾಟಕ

karnataka

ETV Bharat / sports

ಸ್ಟೇಡಿಯಂನಲ್ಲಿ ಅಭಿಮಾನಿಗಳನ್ನು ಮಿಸ್‌ ಮಾಡಿಕೊಳ್ಳುವ ಬಗ್ಗೆ ಶ್ರೇಯಸ್ ಅಯ್ಯರ್‌ ಬೇಸರ - Shreyas Iyer in Delhi fans in stadium

ಐಪಿಎಲ್​ 2020 ಕಳೆದ ಮಾರ್ಚ್​ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್​ 19 ಲಾಕ್​ಡೌನ್​ನಿಂದ ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ಸೆಪ್ಟೆಂಬರ್​ 19ರಿಂದ ಪಂದ್ಯಾರಂಭವಾಗಲಿದೆ. ಸ್ಥಗಿತಗೊಂಡಿದ್ದ ಕ್ರಿಕೆಟ್ ಮತ್ತೆ ಐಪಿಎಲ್​ ಮೂಲಕ ಶುರುವಾಗುತ್ತಿರುವುದಕ್ಕೆ ಶ್ರೇಯಸ್​ ಸಂತಸ ವ್ಯಕ್ತಪಡಿಸಿದರು.

ಡೆಲ್ಲಿ ಕ್ಯಾಪಿಟಲ್​
ಡೆಲ್ಲಿ ಕ್ಯಾಪಿಟಲ್​

By

Published : Aug 4, 2020, 6:58 PM IST

ಹೈದರಾಬಾದ್​:13 ನೇ ಆವೃತ್ತಿಯ ಐಪಿಎಲ್​ ಯುಎಇನಲ್ಲಿ ನಡೆಯುವುದು ಖಚಿತವಾಗಿದೆ. ಈ ಸಂಬಂಧ ಡೆಲ್ಲಿ ಕ್ಯಾಪಿಟಲ್​ ನಾಯಕ ಶ್ರೇಯಸ್​ ಅಯ್ಯರ್​ ಪ್ರತಿಕ್ರಿಯಿಸಿ, ನಾವು ಈ ಬಾರಿ ಸ್ಟೇಡಿಯಂನಲ್ಲಿ ದೆಹಲಿ ಅಭಿಮಾನಿಗಳನ್ನು ಮಿಸ್​ ಮಾಡಿಕೊಳ್ಳಲಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್​ ಅಯ್ಯರ್​

ಇಡೀ ಜಗತ್ತು ಸಾಗುತ್ತಿರುವ ಸವಾಲಿನ ಕಾಲದಲ್ಲಿ ಐಪಿಎಲ್​ ನಡೆಯುತ್ತಿದೆ ಎಂಬ ಸುದ್ದಿ ಸುದೀರ್ಘ ಸಮಯದ ಬಳಿಕ ಕೇಳಿದ ಅತ್ಯುತ್ತಮ ವಿಷಯಗಳಲ್ಲಿ ಒಂದು ಎಂದು 2018ರಲ್ಲಿ ಡೆಲ್ಲಿ ತಂಡವನ್ನು ಪ್ಲೇ ಆಫ್​ಗೆ ಕೊಂಡೊಯ್ದಿದ್ದ ಯುವ ಆಟಗಾರ ಹೇಳುತ್ತಾರೆ.

ಹಿಂದಿನ ಐಪಿಎಲ್‌ ವೇಳೆ ಪಂದ್ಯ ಜಯಿಸಿದ ಸಂಭ್ರಮದಲ್ಲಿ ಡೆಲ್ಲಿ ಕ್ಯಾಪಿಟಲ್​ ತಂಡದ ಸದಸ್ಯರು

"ತಂಡದ ಆಟಗಾರರ ಜೊತೆ ಸೇರಲು ಕಾಯಲಾಗುತ್ತಿಲ್ಲ. ಅದರಲ್ಲೂ ಈ ಬಾರಿ ಹೊಸದಾಗಿ ತಂಡ ಸೇರಿರುವ ಆಟಗಾರರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ. ಈ ಬಾರಿ ಲೀಗ್​ ಅನ್ನು ಅವಿಸ್ಮರಣೀಯವನ್ನಾಗಿಸಲು ನಮ್ಮಿಂದ ಅತ್ಯುತ್ತಮ ಪ್ರದರ್ಶನ ಹೊರಬರಬರಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಬಾರಿ ಪ್ಲೇ ಆಫ್​ ತಲುಪಿದ್ದ ಡೆಲ್ಲಿ ಕ್ಯಾಪಿಟಲ್​, ಕ್ವಾಲಿಫೈಯರ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ವಿರುದ್ಧ ಸೋಲು ಕಂಡಿತ್ತು.

ABOUT THE AUTHOR

...view details