ಕರ್ನಾಟಕ

karnataka

ETV Bharat / sports

ಕ್ರೀಡಾ ಸ್ಪೂರ್ತಿಯಿಲ್ಲದ ಇಂಗ್ಲಿಷರು... ಮೈದಾನದಲ್ಲಿ ವಾರ್ನರ್​-ಸ್ಮಿತ್​ ವಿರುದ್ಧ ಮುಂದುವರಿದ ನಿಂದನೆ - ವಿಶ್ವಕಪ್​

ನಿನ್ನೆ ಲಾರ್ಡ್ಸ್​ನಲ್ಲಿ ನಡೆದ ಪಂದ್ಯದಲ್ಲಿ ವಾರ್ನರ್​ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ವಾರ್ನರ್​ ಮೈದಾನಕ್ಕೆ ಬರುತ್ತಿದ್ದಂತೆ ಇಂಗ್ಲೆಂಡ್​ ಅಭಿಮಾನಿಗಳು ಮತ್ತೆ ಕೆಟ್ಟದಾಗಿ ವರ್ತಿಸಿದ್ದಾರೆ. ಅಲ್ಲದೆ ವಾರ್ನರ್​ ಪ್ರತಿ ಬೌಂಡರಿ ಹೊಡೆದಾಗಲೂ ಚಪ್ಪಾಳೆ ತಟ್ಟದೇ ಕ್ರೀಡಾಸ್ಪೂರ್ತಿ ಮರೆತಿದ್ದಾರೆ.

boo

By

Published : Jun 26, 2019, 4:56 PM IST

ಲಂಡನ್​:ವಿಶ್ವಕಪ್​ ಅಭ್ಯಾಸ ಪಂದ್ಯದಿಂದಲೂ ವಾರ್ನರ್​ ಹಾಗೂ ಸ್ಮಿತ್​ರನ್ನು ಚೀಟರ್ಸ್​ ಎಂದು ಕೂಗಿ ಅವಮಾನಿಸುತ್ತಿದ್ದ ಇಂಗ್ಲೆಂಡ್​ ಅಭಿಮಾನಿಗಳು ವಿಶ್ವಕಪ್​ ಅರ್ಧಕ್ಕಿಂದ ಹೆಚ್ಚು ಪಂದ್ಯಗಳು ಮುಗಿದರೂ ಇನ್ನೂ ಆಸೀಸ್​ ಆಟಗಾರರನ್ನು ನಿಂದಿಸುವುದನ್ನು ಮಾತ್ರ ಬಿಟ್ಟಿಲ್ಲ.

ನಿನ್ನೆ ಲಾರ್ಡ್ಸ್​ನಲ್ಲಿ ನಡೆದ ಪಂದ್ಯದಲ್ಲಿ ವಾರ್ನರ್​ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ವಾರ್ನರ್​ ಮೈದಾನಕ್ಕೆ ಬರುತ್ತಿದ್ದಂತೆ ಇಂಗ್ಲೆಂಡ್​ ಅಭಿಮಾನಿಗಳು ಮತ್ತೆ ಕೆಟ್ಟದಾಗಿ ಪ್ರವರ್ತಿಸಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ತಂಡದ ಆಟಗಾರರು ಬೌಂಡರಿ ಹೊಡೆದಾಗಲೂ ಚಪ್ಪಾಳೆ ತಟ್ಟದೇ ಕ್ರೀಡಾಸ್ಪೂರ್ತಿ ಮರೆತಿದ್ದಾರೆ. ಇದನ್ನು ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್​ ಚೊಪ್ರಾ ತೀವ್ರವಾಗಿ ಖಂಡಿಸಿದ್ದಾರೆ.

ಇಂಗ್ಲೆಂಡ್​ ಅಭಿಮಾನಿಗಳ ಈ ದುರ್ವರ್ತನೆ ಗಮನಿಸಿರುವ ಖಂಡಿಸಿರುವ ಭಾರತೀಯ ಮಾಜಿ ಆಟಗಾರ ಆಕಾಶ್​ ಚೊಪ್ರಾ " ವಾರ್ನರ್​ ಅರ್ಧಶತಕ ಬಾರಿಸಿದರು ಲಾರ್ಡ್ಸ್​ನಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ನಡೆದುಕೊಂಡ ರೀತಿ ನಿಜಕ್ಕೂ ಬೇಸರತಂದಿದೆ. ಇದು ತುಂಬಾ ಕೆಟ್ಟ ಅಭಿರುಚಿ" ಎಂದು ಟ್ವೀಟ್​ ಮಾಡಿ ತಮ್ಮ ಬೇಸರ ಹೊರ ಹಾಕಿದ್ದಾರೆ.

ಭಾರತದ ಅಭಿಮಾನಿಗಳು ಕೂಡ ಸ್ಮಿತ್​ರನ್ನು ಹಿಯಾಳಿಸಿದ್ದರು. ಆ ವೇಳೆ ಸಿಟ್ಟಿಗೆದ್ದಿದ್ದ ಟೀಮ್​ ಇಂಡಿಯಾ ನಾಯಕ ಉತ್ತಮವಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಸ್ಮಿತ್​ರನ್ನು ಚೆಪ್ಪಾಳೆ ತಟ್ಟಿ ಪ್ರೋತ್ಸಾಹಿಸುವಂತೆ ಮೈದಾನದಿಂದಲೇ ಕೇಳಿಕೊಂಡಿದ್ದರು. ಈ ವಿಡಿಯೋ ವೈರಲ್​ ಆಗಿ ಕೊಹ್ಲಿಯನ್ನು ಇಡೀ ಕ್ರಿಕೆಟ್​ ಜಗತ್ತು ಕೊಂಡಾಡಿತ್ತು.

ABOUT THE AUTHOR

...view details