ದುಬೈ: ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿದೆ.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಟ ಮುಂಬೈ ಇಂಡಿಯನ್ಸ್ ತಂಡವನ್ನೇ ಬಗ್ಗಬಡಿದಿದ್ದ ಧೋನಿ ಬಳಗ ನಂತರ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ಟೀಕೆಗೆ ಗುರಿಯಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ತಿರುಗಿಬಿದ್ದ ಚೆನ್ನೈ 179 ರನ್ಗಳ ಗುರಿಯನ್ನು ಇನ್ನು 14 ಎಸೆತಗಳು ಬಾಕಿಯುಳಿದಿರುವಂತೆ ಜಯ ಸಾಧಿಸಿದೆ.
ಅನುಭವಿಗಳಾದ ಶೇನ್ ವಾಟ್ಸನ್ ಹಾಗೂ ಪ್ಲೆಸಿಸ್ ಪಂಜಾಬ್ ಬೌಲರ್ಗಳನ್ನು ಮನಬಂದಂತೆ ದಂಡಿಸಿ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಶೇನ್ ವಾಟ್ಸನ್ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 83 ರನ್ ಸಿಡಿಸಿದರೆ, ಪ್ಲೆಸಿಸ್ 53 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 87 ರನ್ ಕಲೆಯಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು.