ನವದೆಹಲಿ:ಭಾರತದ ಹಿರಿಯ ಬ್ಯಾಟ್ಸ್ಮನ್ ಸುರೇಶ್ ರೈನಾ ನೆಟ್ಸ್ಗೆ ಮರಳಿದ್ದು, ಭಾರತದ ಹಿರಿಯ ಬೌಲರ್ಗಳಾದ ಮೊಹಮ್ಮದ್ ಶಮಿ ಹಾಗೂ ಪಿಯುಷ್ ಚಾವ್ಲಾ ಅವರ ಬೌಲಿಂಗ್ಗೆ ಬ್ಯಾಟಿಂಗ್ ನಡೆಸಿದ್ದಾರೆ.
ಚಾವ್ಲಾ ಮತ್ತು ಶಮಿ ಅವರ ಬೌಲಿಂಗ್ ಎದುರಿಸುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವೀಕೆಂಡ್ನಲ್ಲಿ ಪಿಯುಷ್ ಚಾವ್ಲಾ ಮತ್ತು ಮೊಹಮ್ಮದ್ ಶಮಿ ಅವರೊಂದಿಗೆ ಅಭ್ಯಾಸವನ್ನು ಆನಂದಿಸಲು ಸಿದ್ದವಾಗಿದ್ದೇನೆ . ಇದೇ ವೇಗವನ್ನು ಮುಂದು ವರಿಸಿಕೊಂಡು ಹೋಗುತ್ತೇವೆ. ವೀಕೆಂಡ್ ಅನ್ನು ಉತ್ತಮ ರೀತಿಯಲ್ಲಿ ಆರಂಭಿಸಿದ್ದೇವೆ. ಸಣ್ಣ ವಿಜಯಗಳನ್ನು ಆನಂದಿಸಿ. ಹ್ಯಾಪಿ ವೀಕೆಂಡ್ ಎಂದು ಟ್ವೀಟ್ ಮಾಡಿದ್ದಾರೆ.