ಕರ್ನಾಟಕ

karnataka

ETV Bharat / sports

ಸ್ಟೋಕ್ಸ್ ಐಪಿಎಲ್​ನಲ್ಲೂ ಬೌಲರ್​ಗಳನ್ನು ಇದೇ ರೀತಿ ಹೆದರಿಸಲಿದ್ದಾರೆಂದು ಭಾವಿಸುವೆ : ಜೋಸ್ ಬಟ್ಲರ್​ - ಬೆನ್​ಸ್ಟೋಕ್ಸ್ ಸ್ಫೋಟಕ ಬ್ಯಾಟಿಂಗ್

ಅವರು (ಸ್ಟೋಕ್ಸ್​) ಬೌಲಿಂಗ್​ ಮಾಡುವವರನ್ನು ಬೆದರಿಸುವ ವ್ಯಕ್ತಿ, ನಾಳಿನ ಪಂದ್ಯ ಮತ್ತು ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ಪರವೂ ಇದೇ ಆಟ ಮುಂದುವರಿಯಬಹುದು ಎಂದು ಸರಣಿ ನಿರ್ಧರಿಸುವ ಕೊನೆಯ ಪಂದ್ಯಕ್ಕೂ ಮೊದಲು ನಡೆದ ಗೋಷ್ಠಿಯಲ್ಲಿ ಬಟ್ಲರ್​ ಹೇಳಿದ್ದಾರೆ..

ಬೆನ್​ ಸ್ಟೋಕ್ಸ್​
ಬೆನ್​ ಸ್ಟೋಕ್ಸ್​

By

Published : Mar 27, 2021, 9:48 PM IST

ಪುಣೆ: ಭಾರತದೆದುರು 2ನೇ ಏಕದಿನ ಪಂದ್ಯದಲ್ಲಿ ವಿಧ್ವಂಶಕ ಬ್ಯಾಟಿಂಗ್ ನಡೆಸಿ ಭಾರತದ ಬೌಲರ್​ಗಳ ದಾಳಿಯನ್ನು ಪುಡಿಗಟ್ಟಿದ್ದ ಇಂಗ್ಲೆಂಡ್ ಆಲ್​ರೌಂಡರ್ ಬೆನ್​ ಸ್ಟೋಕ್ಸ್​​ ಮುಂದಿನ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್ ಪರ ಇದೇ ಪ್ರದರ್ಶನ ಮುಂದುವರಿಸಿಲಿದ್ದಾರೆ ಎಂಬ ಭರವಸೆಯಿದೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್​ ತಿಳಿಸಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಬೆನ್​ಸ್ಟೋಕ್ಸ್​ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು ಕೇವಲ 52 ಎಸೆತಗಳಲ್ಲಿ 4 ಬೌಂಡರಿ ಮತ್ತು ಬರೋಬ್ಬರಿ 10 ಸಿಕ್ಸರ್​ ಸಿಡಿಸುವ ಮೂಲಕ 99 ರನ್​ ಗಳಿಸಿದ್ದರು. ಅವರು ಒಂದೇ ಇನ್ನಿಂಗ್ಸ್​ನಲ್ಲಿ ಗರಿಷ್ಠ ಸಿಕ್ಸರ್​ ಸಿಡಿಸಿ ಇಂಗ್ಲೆಂಡ್​ನ 3ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು.

ಜೋಸ್ ಬಟ್ಲರ್

ಜೋ ರೂಟ್ ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಬೆನ್​ ಸ್ಟೋಕ್ಸ್​ 2ನೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತೀಯ ಬೌಲರ್​ಗಳನ್ನು ಹೈರಾಣಾಗಿಸಿದ್ದರು. ನಾಯಕ್ ಬಟ್ಲರ್ ಪ್ರಕಾರ ಇಂಗ್ಲಿಷ್ ಆಲ್​ರೌಂಡರ್​ ಐಪಿಎಲ್​ನಲ್ಲೂ ಬೌಲರ್​ಗಳನ್ನು ಇದೇ ರೀತಿ ಬೌಲಿಂಗ್ ಮಾಡಲು ಹೆದರುವಂತೆ ಮಾಡಲಿದ್ದಾರೆಂಬ ಭರವಸೆಯಲ್ಲಿರುವುದಾಗಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಅತೀ ಸುರಕ್ಷಿತ ಆಟ 2023ರ ವಿಶ್ವಕಪ್​ನಲ್ಲಿ ಭಾರತಕ್ಕೆ ಮುಳುವಾಗುತ್ತದೆ : ವಾನ್‌-'ರ್ನ್‌'

"ಅವರು (ಸ್ಟೋಕ್ಸ್​) ಬೌಲಿಂಗ್​ ಮಾಡುವವರನ್ನು ಬೆದರಿಸುವ ವ್ಯಕ್ತಿ, ನಾಳಿನ ಪಂದ್ಯ ಮತ್ತು ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ಪರವೂ ಇದೇ ಆಟ ಮುಂದುವರಿಯಬಹುದು ಎಂದು ಸರಣಿ ನಿರ್ಧರಿಸುವ ಕೊನೆಯ ಪಂದ್ಯಕ್ಕೂ ಮೊದಲು ನಡೆದ ಗೋಷ್ಠಿಯಲ್ಲಿ ಬಟ್ಲರ್​ ಹೇಳಿದ್ದಾರೆ.

ಸ್ಟೋಕ್ಸ್​ ಕಳೆದ ಕೆಲವು ವರ್ಷಗಳಿಂದ ಆಟಗಾರನಾಗಿ ವಿಕಸನಗೊಳ್ಳುತ್ತಿರುವ ರೀತಿ ಮತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಪರಿ ತಮ್ಮನ್ನು ಸಾಕಷ್ಟು ಪ್ರಭಾವಿತನನ್ನಾಗಿ ಮಾಡಿದೆ ಎಂದು ಇಂಗ್ಲೆಂಡ್ ಹಂಗಾಮಿ ಕಪ್ತಾನ ತಿಳಿಸಿದ್ದಾರೆ.

"ಸ್ಟೋಕ್ಸ್ ಇಂತಹದೇ ಕೆಲವು ಇನ್ನಿಂಗ್ಸ್​ಗಳನ್ನು ಹೊಂದಿದ್ದಾರೆ. ಅದರಲ್ಲಿ ವಿಶ್ವಕಪ್​ ಫೈನಲ್ಸ್​ನ(80+) ಇನ್ನಿಂಗ್ಸ್​ ಉತ್ತಮವಾಗಿದೆ. ಆದರೆ, ನಮೆಗೆಲ್ಲಾ ಬೆನ್​ ಅವರ ಸಾಮರ್ಥ್ಯ ತಿಳಿದಿದೆ. ಅವರ ಬ್ಯಾಟಿಂಗ್ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಸುಧಾರಣೆಯಾಗುತ್ತಾ ಬರುತ್ತಿದೆ ಎಂದು ನಾನು ಭಾವಿಸುತ್ತೇನೆ.

ಇದು ಮುಂದೆ ಇನ್ನು ಉನ್ನತ ಹಂತಕ್ಕೆ ಹೋಗಲಿದೆ ಮತ್ತು ಮೂರು ಮಾದರಿಯ ಕ್ರಿಕೆಟ್​ನಲ್ಲೂ ನಾವು ಅದನ್ನು ನೋಡಬಹುದಾಗಿದೆ" ಎಂದು ಬಟ್ಲರ್ ತಮ್ಮ ಸಹ ಆಟಗಾರನನ್ನು ಗುಣಗಾನ ಮಾಡಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯ ಭಾನುವಾರ ಪುಣೆ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿ ವಶಪಡಿಸಿಕೊಳ್ಳಲು ಎರಡು ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಲಿದೆ.
ಇದನ್ನು ಓದಿ:ಪಂದ್ಯ ಗೆಲ್ಲುವುದಕ್ಕಾಗಿ ಹೆಚ್ಚು ಬೌಂಡರಿ ಹೊಡೆಯುವುದು ಈಗಿನ ಟ್ರೆಂಡ್ ​: ಬೈರ್​ಸ್ಟೋವ್​

ABOUT THE AUTHOR

...view details