ದುಬೈ:ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ, ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಗಿಟಾರ್ ನುಡಿಸುತ್ತಿರುವ ವಿಡಿಯೋ ವೈರಲ್ ಅಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಸ್ಮಿತ್ ಗಿಟಾರ್ ನುಡಿಸುತ್ತಾ ಗಾಯಕ ಮಿಚ್ ರೊಸೆಲ್ ಅವರ 'ಆಲ್ ಐ ನೀಡ್ ಟು ಸೀ' ಎಂಬ ಹಾಡನ್ನು ಹಾಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.