ದುಬೈ:13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದ್ದು, ಯಂಗ್ ಪ್ಲೇಯರ್ಸ್ ಆರ್ಭಟ ಜೋರಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಕೂಡ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದು, ಇದರ ಬಗ್ಗೆ ಮಾತನಾಡಿದ್ದಾರೆ.
ವಿಕೆಟ್ ಕೀಪರ್ ಸ್ಯಾಮ್ಸನ್ ಮಾತು ತಾವು ಆಡಿರುವ ಎರಡು ಐಪಿಎಲ್ ಪಂದ್ಯಗಳಲ್ಲಿ ಬರೋಬ್ಬರಿ 16 ಸಿಕ್ಸರ್ ಸಿಡಿಸಿರುವ ಸಂಜು ಸ್ಯಾಮ್ಸನ್ ಎದುರಾಳಿ ಬೌಲರ್ಗಳಲ್ಲಿ ನಡುಕ ಹುಟ್ಟಿಸಿದ್ದಾರೆ. 25 ವರ್ಷದ ಸ್ಯಾಮ್ಸನ್ ವರ್ಷದ ಹಿಂದೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜತೆ ನಡೆಸಿದ ಸಂವಾದವೇ ಕ್ರಿಕೆಟ್ ಬಗ್ಗೆ ತಮ್ಮ ಮನೋಭಾವ ಬದಲಾಯಿಸಲು ಸಹಾಯವಾಯಿತು ಎಂದಿದ್ದಾರೆ.
ವಿರಾಟ್ ಕೊಹ್ಲಿ ಜೊತೆ ಸ್ಯಾಮ್ಸನ್ ಕ್ರಿಕೆಟ್ ಬಗ್ಗೆ ತಮ್ಮ ಮನೋಭಾವ ಬದಲಾಯಿಸಲು ಹೇಗೆ ಸಹಾಯ ಮಾಡಿದರೂ ಎಂಬುದರ ಕುರಿತು ಮಾತನಾಡಿರುವ ಸ್ಯಾಮ್ಸನ್, ನಾನು ವಿರಾಟ್ ಭಾಯ್ ಜತೆ ತರಬೇತಿ ಪಡೆಯುತ್ತಿದ್ದೆ. ಫಿಟ್ನೆಸ್ ಸೇರಿ ತಮ್ಮ ತರಬೇತಿ ದಿನಚರಿ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಾರೆ. ಈ ವೇಳೆ, ನಾನು ಅನೇಕ ಪ್ರಶ್ನೆ ಕೇಳಿದ್ದೇನೆ. ಎಲ್ಲದ್ದಕ್ಕೂ ಅವರು ಉತ್ತರ ನೀಡಿದ್ದಾರೆ ಎಂದಿದ್ದಾರೆ.
ವಿಕೆಟ್ ಕೀಪರ್ ಸ್ಯಾಮ್ಸನ್ 10 ವರ್ಷಗಳ ಕಾಲ ನೀನು ಕ್ರಿಕೆಟ್ ಆಡಬೇಕು ಎಂದು ತೀರ್ಮಾನಿಸಿದ್ರೆ, ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. 10 ವರ್ಷಗಳ ನಂತರ ನಮಗೆ ಏನು ಬೇಕಾದ್ರೂ ಮಾಡಬಹುದು. ಆದರೆ ಸದ್ಯ ಕ್ರಿಕೆಟ್ನಲ್ಲಿ ಬಹಳ ದಿನಗಳ ಕಾಲ ಇರಬೇಕಾದರೆ ಫಿಟ್ನೆಸ್ ಅತಿ ಮುಖ್ಯವಾಗಿರುತ್ತದೆ ಎಂದು ಅವರು ಹೇಳಿದ್ದರು ಎಂದಿದ್ದಾರೆ. ಅವರ ಮಾತು ಕೇಳಿ ನನಗೆ ತುಂಬಾ ಸಂತೋಷವಾಯಿತು ಎಂದು ವಿಕೆಟ್ ಕೀಪರ್ ಹೇಳಿಕೊಂಡಿದ್ದಾರೆ.
ಸಂಜು ಸ್ಯಾಮ್ಸನ್ ಈಗಾಗಲೇ ಆಡಿರುವ ಎರಡು ಪಂದ್ಯಗಳಿಂದ 34 ಎಸೆತಗಳಲ್ಲಿ 74ರನ್ ಹಾಗೂ 42 ಎಸೆತಗಳಲ್ಲಿ 85ರನ್ಗಳಿಕೆ ಮಾಡಿದ್ದಾರೆ. ಈಗಾಗಲೇ ಸ್ಯಾಮ್ಸನ್ ಅವರನ್ನ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಎಂ.ಎಸ್ ಧೋನಿಗೆ ಹೋಲಿಕೆ ಮಾಡಲಾಗುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ಸ್ಯಾಮ್ಸನ್, ಧೋನಿಯಂತೆ ಆಡಲು ಯೋಚಿಸುವುದು ಅಷ್ಟು ಸುಲಭವಲ್ಲ. ಅವರು ಅತ್ಯುತ್ತಮ ಫಿನಿಶರ್ಗಳಲ್ಲಿ ಒಬ್ಬರು. ನಾನು ಅವರಂತೆ ಇರಬೇಕು ಎಂದು ಯೋಚನೆ ಮಾಡಿಲ್ಲ. ಆದರೆ ಅವರನ್ನ ನಿಜವಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.