ಮೆಲ್ಬೋರ್ನ್: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮೆಲ್ಬೋರ್ನ್ನಲ್ಲಿರುವ ಭಾರತ ತಂಡ ಸೇರಿಕೊಂಡಿದ್ದಾರೆ.
ರೋಹಿತ್ ಶರ್ಮಾ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಬುಧವಾರ ಮೆಲ್ಬೋರ್ನ್ನಲ್ಲಿ ಟೀಮ್ ಇಂಡಿಯಾ ಆಟಗಾರರಿರುವ ಹೋಟೆಲ್ಗೆ ಆಗಮಿಸಿ, ಆಟಗಾರರನ್ನು ಭೇಟಿ ಮಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಪೋಸ್ಟ್ ಮಾಡಿದೆ.
"ಮೆಲ್ಬೋರ್ನ್ನಲ್ಲಿ ಯಾರು ತಂಡವನ್ನು ಸೇರಿಕೊಳ್ಳುತ್ತಿದ್ದಾರೆ ನೋಡಿ, ರೋಹಿತ್ ಭಾರತ ತಂಡವನ್ನು ಸೇರಿಕೊಂಡಿದ್ದು, ಅವರಿಗೆ ಆತ್ಮೀಯ ಸ್ವಾಗತ." ಎಂದು ಬರೆದು ಬಿಸಿಸಿಐ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ.
ಐಪಿಎಲ್ ವೇಳೆ ರೋಹಿತ್ ಶರ್ಮಾ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಅವರಿಗೆ ಸೀಮಿತ ಓವರ್ಗಳ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ನಂತರ ರೋಹಿತ್ ಶರ್ಮಾ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಫಿಟ್ನೆಸ್ ಪರೀಕ್ಷೆ ಎದುರಿಸಿ ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದರು. ಆದರೆ ಕೋವಿಡ್ ಪ್ರೋಟೋಕಾಲ್ಗಳ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದ್ದರಿಂದ ಅವರು ಮೊದಲೆರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
ಇದನ್ನು ಓದಿ:3ನೇ ಟೆಸ್ಟ್ಗೆ ರೋಹಿತ್ ಆಗಮನ.. ಮಯಾಂಕ್ ಅಥವಾ ವಿಹಾರಿ ಹೊರಗುಳಿಯಲೇಬೇಕು?