ಕ್ರೈಸ್ಟ್ಚರ್ಚ್: ಹೇಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ ಕ್ಷೇತ್ರ ರಕ್ಷಣೆಯಲ್ಲಿ ಕಮಾಲ್ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ ತಂಡ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ಜಡೇಜಾ ಜಾದೂ ಮಾಡಿದ್ದಾರೆ. ವಾಗ್ನರ್ ಬಾರಿಸಿದ ಚೆಂಡನ್ನು ಸೂಪರ್ ಮ್ಯಾನ್ನಂತೆ ಹಾರಿ ಹಿಡಿದ ಜಡೇಜಾ ಕ್ರಿಕೆಟ್ ಅಭಿಮಾನಿಗಳನ್ನು ಆನಂದದ ಕಡಲಲ್ಲಿ ತೇಲಿಸಿದ್ದಾರೆ.