ಕರಾಚಿ:ಪಾಕಿಸ್ತಾನದ ಹಿರಿಯ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಪಿಎಸ್ಎಲ್ ಲೀಗ್ನಲ್ಲಿ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಹಾಲಿ ಚಾಂಪಿಯನ್ ಕ್ವೆಟ್ಟಾ ಗ್ಲಾಡಿಯೇಡರ್ ನೀಡಿದ 149 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಪೇಶಾವರ್ ಜಲ್ಮಿ ತಂಡ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಅವರ ಅಮೋಘ ಶತಕ ಹಾಗೂ ಯುವ ಬ್ಯಾಟ್ಸ್ಮನ್ ಹೈದರ್ 25 ರನ್ಗಳ ನೆರವಿನಿಂದ 18.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
38 ವರ್ಷದ ಕಮ್ರನ್ ಅಕ್ಮಲ್ 54 ಎಸೆತಗಳಲ್ಲಿ ತಮ್ಮ ಪಿಎಸ್ಎಲ್ನ 3ನೇ ಶತಕ ದಾಖಲಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ ಸೇರಿತ್ತು. ಇವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಪೇಶಾವರ್ ತಂಡ ಈ ಆವೃತ್ತಿಯಲ್ಲಿ ಮೊದಲ ಜಯ ದಾಖಲಿಸಿತು.