ಕರ್ನಾಟಕ

karnataka

ETV Bharat / sports

ನೂರನೇ ಟೆಸ್ಟ್ ಪಂದ್ಯಕ್ಕೆ ಎದುರುನೋಡುತ್ತಿದ್ದೇನೆ: ನಾಥನ್ ಲಿಯಾನ್ - Nathan Lyon on playing his 100th Test match

ನಾಥನ್ ಲಿಯಾನ್ ಶುಕ್ರವಾರದಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಕಣಕ್ಕಿಳಿದರೆ ಆಸೀಸ್ ಪರ 100 ಟೆಸ್ಟ್ ಪಂದ್ಯವಾಡಿದ 13ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

Nathan Lyon
ನಾಥನ್ ಲಿಯಾನ್

By

Published : Jan 13, 2021, 1:30 PM IST

ಬ್ರಿಸ್ಬೇನ್: ಶುಕ್ರವಾರ ಆರಂಭವಾಗುವ ಬಾರ್ಡರ್ - ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದವಾಡಲು ಆಸ್ಟ್ರೇಲಿಯಾ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಗಬ್ಬಾಕ್ಕೆ ಕಾಲಿಟ್ಟಿದ್ದು, ಇದು ಅವರ ನೂರನೆ ಟೆಸ್ಟ್ ಪಂದ್ಯವಾಗಿದೆ.

ತಮ್ಮ ವೃತ್ತಿಜೀವನದ ಮುಂಬರುವ ಸಂತೋಷದ ಕ್ಷಣದ ಕುರಿತು ಪ್ರತಿಕ್ರಿಯಿಸಿದ ಲಿಯಾನ್, "ಬಹಳ ಅದ್ಭುತವಾಗಿದೆ.. ಹೆಮ್ಮೆಯ" ಅನುಭವ ಎಂದು ಹೇಳಿದ್ದಾರೆ. ಶುಕ್ರವಾರದ ಪಂದ್ಯದಲ್ಲಿ ಕಣಕ್ಕಿಳಿದರೆ ಆಸೀಸ್ ಪರ 100 ಟೆಸ್ಟ್ ಪಂದ್ಯವಾಡಿದ 13ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ನಾಥನ್ ಲಿಯಾನ್, ಆಸ್ಟ್ರೇಲಿಯಾ ಆಫ್ ಸ್ಪಿನ್ನರ್

ಇದಲ್ಲದೇ ಲಿಯಾನ್ ಟೆಸ್ಟ್ ಕ್ರಿಕೆಟ್​ನಲ್ಲಿ 400 ವಿಕೆಟ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪುವ ಹಾದಿಯಲ್ಲಿದ್ದು, ಇಲ್ಲಿಯವರೆಗೆ 396 ವಿಕೆಟ್‌ಗಳನ್ನು ಪಡೆದಿದ್ದು, ಭಾರತ ವಿರುದ್ಧದ ಈ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ 4 ವಿಕೆಟ್ ಪಡೆದು ಹೊಸ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ.

"ಗಬ್ಬಾ" ಮೈದಾನ ಸಾಂಪ್ರದಾಯಿಕವಾಗಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿದಿದ್ದರೂ, ಉತ್ತಮ ಬೌನ್ಸ್ ತನಗೆ ಸರಿಹೊಂದುತ್ತದೆ ಎಂದು ಲಿಯಾನ್ ನಂಬಿದ್ದಾರೆ.

ABOUT THE AUTHOR

...view details