ಸಿಡ್ನಿ:ಆಸ್ಟ್ರೇಲಿಯಾದ ಬಿಗ್ಬ್ಯಾಶ್ ಟಿ20 ಲೀಗ್ನಲ್ಲಿ ಒಂದೇ ದಿನ ಇಬ್ಬರು ವಿದೇಶಿ ಬೌಲರ್ಗಳು ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಹಿಂದಿನ 8 ಬಿಗ್ಬ್ಯಾಶ್ ಲೀಗ್ಗಳಲ್ಲಿ ಓರ್ವ ವಿದೇಶಿ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದಿರಲಿಲ್ಲ. ಆದರೆ ಬುಧವಾರ ನಡೆದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ರಶೀದ್ ಖಾನ್ ಹಾಗೂ ಹ್ಯಾರೀಸ್ ರವೂಫ್ ಹ್ಯಾಟ್ರಿಕ್ ಪಡೆದಿದ್ದಾರೆ. ರಶೀದ್ ಎರಡು ಓವರ್ಗಳಲ್ಲಿ ಹ್ಯಾಟ್ರಿಕ್ ಪಡೆದರೆ, ರವೂಫ್ ಒಂದೇ ಓವರ್ನಲ್ಲಿ ಮೂರು ವಿಕೆಟ್ ಪಡೆದು ಮಿಂಚಿದರು.
ರಶೀದ್ ಖಾನ್ ತಮ್ಮ ಮೂರನೇ ಓವರ್ನ ಕೊನೆಯ 2 ಎಸೆತಗಳಲ್ಲಿ ಜೇಮ್ಸ್ ವಿನ್ಸ್ ಹಾಗೂ ಜಾಕ್ ಎಡ್ವರ್ಡ್ಸ್ ರನ್ನು ಪೆವಿಲಿಯನ್ಗಟ್ಟಿದರೆ, ತಮ್ಮ ನಾಲ್ಕನೇ ಓವರ್ನ ಮೊದಲ ಎಸೆತದಲ್ಲಿ ಜೋರ್ಡನ್ ಸಿಲ್ಕ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ತಮ್ಮ ಮೂರನೇ ಹ್ಯಾಟ್ರಿಕ್ ಪಡೆದರು.
ಮೆಲ್ಬೋರ್ನ್ ತಂಡದ ಪರ ಆಡುತ್ತಿರುವ ಹ್ಯಾರೀಸ್ ರವೂಫ್ ದಿನದ ಎರಡನೇ ಪಂದ್ಯದಲ್ಲಿ ಸಿಡ್ನಿ ಥಂಡರ್ ವಿರುದ್ಧ 20 ನೇ ಓವರ್ನ 2ನೇ ಎಸೆತದಲ್ಲಿ ಮ್ಯಾಥ್ಯೂ ಗಿಲ್ಕಿಸ್(41), 3ನೇ ಎಸೆತದಲ್ಲಿ ಫರ್ಗ್ಯುಸನ್(35) ಹಾಗೂ ನಾಲ್ಕನೇ ಎಸೆತದಲ್ಲಿ ಡೇನಿಯಲ್ ಸ್ಯಾಮ್ಸ್(0) ವಿಕೆಟ್ ಪಡೆದರು.