ಕರ್ನಾಟಕ

karnataka

ETV Bharat / sports

15 ವರ್ಷದ ಶೆಫಾಲಿ ವರ್ಮಾ ಭಾರತ ತಂಡಕ್ಕೆ ಪದಾರ್ಪಣೆ - ಶೆಫಾಲಿ ಡಕ್​ಔಟ್

ಮಂಗಳವಾರ ಸೂರತ್​ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಮೂಲಕ ಭಾರತ ತಂಡಕ್ಕೆ15 ವರ್ಷದ ಶೆಫಾಲಿ ಪದಾರ್ಪಣೆ ಮಾಡಿದ್ದಾರೆ.

ಶೆಫಾಲಿ

By

Published : Sep 25, 2019, 1:14 PM IST

Updated : Sep 25, 2019, 6:50 PM IST

ಸೂರತ್​: 15 ವರ್ಷದ ಶೆಫಾಲಿ ವರ್ಮಾ ಭಾರತ ತಂಡದ ಪರ ಟಿ20 ಕ್ರಿಕೆಟ್​ಗೆ ಕಾಲಿಟ್ಟ 2ನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

15 ವರ್ಷದ ಶೆಫಾಲಿ ಮಂಗಳವಾರ ಸೂರತ್​ನಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಗಾರ್ಗಿ ಬ್ಯಾನರ್ಜಿ(14 ವರ್ಷ,165 ದಿನಗಳು) ನಂತರ ಭಾರತ ತಂಡ ಸೇರಿದ ಎರಡನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಶೆಫಾಲಿ ಪಾತ್ರರಾಗಿದ್ದಾರೆ.

ಗಾರ್ಗಿ ಬ್ಯಾನರ್ಜಿ 14 ವರ್ಷ 165 ದಿನಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದರು. ಟಿ20 ಕ್ರಿಕೆಟ್​ಗೆ ಹಿರಿಯ ಆಟಗಾರ್ತಿ ಮಿಥಾಲಿ ರಾಜ್​ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ದೇಶಿ ಕ್ರಿಕೆಟ್​ನಲ್ಲಿ ರನ್​ ಹೊಳೆಯನ್ನೆ ಹರಿಸಿರುವ ಶೆಫಾಲಿ ವರ್ಮಾರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿಕೊಂಡಿದೆ.

ಸೊನ್ನೆಗೆ ವಿಕೆಟ್​ ನೀಡಿ ಸಚಿನ್​ ನೆನಪಿಸಿದ ಶೆಫಾಲಿ!

ಭಾರತ ಕ್ರಿಕೆಟ್​ನ ಲೆಜೆಂಡರಿ ಬ್ಯಾಟ್ಸ್​ಮನ್​ ಸಚಿನ್ ತೆಂಡೂಲ್ಕರ್ ಅವ​ರನ್ನು ಸ್ಫೂರ್ತಿಯಾಗಿಸಿಕೊಂಡಿದ್ದ ಶೆಫಾಲಿ ಅವರು ಸಚಿನ್​ ಅವರಂತೆಯೇ ಮೊದಲ ಪಂದ್ಯದಲ್ಲಿ ಡಕ್​ಔಟ್​ ಆಗಿದ್ದಾರೆ. ಸಚಿನ್​ ಕೂಡ ತಮ್ಮ1989ರಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ಡೆಬ್ಯೂ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು.

Last Updated : Sep 25, 2019, 6:50 PM IST

ABOUT THE AUTHOR

...view details