ಚೆನ್ನೈ:ಎಡಗೈ ಚೈನಾಮನ್ ಕುಲ್ದೀಪ್ ಯಾದವ್ರನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ 11ರ ಬಳಗದಲ್ಲಿ ಆಯ್ಕೆ ಮಾಡದಿದ್ದಕ್ಕೆ ಯಾವುದೇ ವಿಷಾದ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯದ ಕಾರಣ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಬಿದ್ದ ಮೇಲೆ ಶಹಬಾಜ್ ನದೀಮ್ ಮತ್ತು ರಾಹುಲ್ ಚಹಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ನದೀಮ್ ಮೊದಲ ಪಂದ್ಯದಲ್ಲಿ ಆಡುವ ಅವಕಾಶವನ್ನೂ ಪಡೆದಿದ್ದರು. ಆದರೆ, ಕುಲ್ದೀಪ್ ಯಾದವ್ರನ್ನು ಆಯ್ಕೆ ಮಾಡದಿದ್ದಕ್ಕೆ ಹಲವಾರು ಕ್ರಿಕೆಟಿಗರು ಹಾಗೂ ಅಭಿಮಾನಿಗಳಿಂದ ಟೀಕೆ ಕೇಳಿ ಬಂದಿತ್ತು.
ವಿರಾಟ್ ಕೊಹ್ಲಿ, ಭಾರತೀಯ ತಂಡದ ನಾಯಕ ಪಂದ್ಯ ಬಳಿಕ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಕುಲ್ದೀಪ್ ಯಾದವ್ ಆಯ್ಕೆ ಮಾಡದಿರುವ ಬಗ್ಗೆ ವಿಷಾದವಿದೆಯೇ? ಎಂದು ವಿರಾಟ್ ಕೊಹ್ಲಿಗೆ ಕೇಳಿದ್ದಕ್ಕೆ, ಟೀಮ್ ಇಂಡಿಯಾ ನಾಯಕ, ಖಂಡಿತ ಅದರ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
"ನಿಜವಾಗಿಯೂ ವಿಷಾದವಿಲ್ಲ. ತಂಡದಲ್ಲಿ ಇಬ್ಬರು ಆಫ್‌ಸ್ಪಿನ್ನರ್‌ಗಳನ್ನು ಆಡಿಸುವಾಗ ಹೆಚ್ಚು- ಕಡಿಮೆ ಕುಲ್ದೀಪ್ ಯಾದವ್ ಕೂಡ ಅದೇ ಸಾಮ್ಯತೆಯ ಬೌಲಿಂಗ್ ಹೊಂದಿದ್ದಾರೆ. ಆದ್ದರಿಂದ ಬೌಲಿಂಗ್ ದಾಳಿಯಲ್ಲಿ ನಿಮಗೆ ವೈವಿಧ್ಯತೆ ಅಗತ್ಯವಾಗುತ್ತದೆ. ಹೀಗಾಗಿ ಆಡುವ ಬಳಗದಲ್ಲಿ ಯಾವ ರೀತಿ ಬೌಲಿಂಗ್ ಸಂಯೋಜನೆ ಇರಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿದ್ದೆವು. ಕುಲ್ದೀಪ್ ಕೈಬಿಡುವ ನಮ್ಮ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲ. ನಾವು ವಿಭಿನ್ನ ದಾಳಿಯನ್ನು ಹೊಂದುವ ಸಂಯೋಜನೆಗೆ ಮಹತ್ವ ನೀಡಿದ್ದೆವು" ಎಂದು ವಿರಾಟ್ ಹೇಳಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ತಂಡ ನಮಗಿಂತ ಹೆಚ್ಚು ಸ್ಥಿರತೆ, ವೃತ್ತಿಪರ ಪ್ರದರ್ಶನ ತೋರಿದೆ: ವಿರಾಟ್ ಕೊಹ್ಲಿ