ಜೈಪುರ :2021ರ ಐಪಿಎಲ್ಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಸೋಮವಾರ ನೂತನ ಜರ್ಸಿಯನ್ನ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಲೈವ್ ಶೋ ಮೂಲಕ ಬಿಡುಗಡೆ ಮಾಡಿದೆ.
ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಲೈಟ್ ಶೋ ಮತ್ತು 3ಡಿ ಪ್ರೊಜೆಕ್ಷನ್ ಮೂಲಕ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ ಮತ್ತು ಮುಂಬೈನಲ್ಲಿ ಬಯೋ ಬಬಲ್ನಲ್ಲಿರುವ ಅರ್ಆರ್ ತಂಡದ ಸದಸ್ಯರಿಗೆ ನೇರಪ್ರಸಾರವಾಯಿತು.
"ಕ್ರೀಡಾಂಗಣ, ಜೈಪುರ ನಗರ, ರಾಜಸ್ಥಾನಿ ಸಂಸ್ಕೃತಿಯ ಬಗ್ಗೆ ರಾಯಲ್ಸ್ ಅಭಿಮಾನಿಗಳು ತಮ್ಮ ಹೃದಯದಲ್ಲಿ ಹೊಂದಿರುವ ಪ್ರೀತಿಗಾಗಿ ಈ ಪ್ರದರ್ಶನ. ಹಾಗೆಯೇ ರೆಡ್ ಬುಲ್‌ನೊಂದಿಗಿನ ಫ್ರ್ಯಾಂಚೈಸಿಯ ಒಡನಾಟ ಮತ್ತು ಅವರು ತ್ವರಿತ ಗತಿಯಲ್ಲಿ ಮುಂದುವರಿಯಲು ಹೇಗೆ ಸಹಾಯ ಮಾಡುತ್ತದೆ ಎಂಬುದರ ಪ್ರತಿಬಿಂಬವಾಗಿದೆ. ಹೊಸ ಆಲೋಚನೆಗಳನ್ನು ಹೊರತರುತ್ತಿದ್ದು, ಇದು ತಂಡದ ಬೆಳವಣಿಗೆಗೆ ಸಹಾಯ ಮಾಡುತ್ತದೆ" ಎಂದು ಅರ್ಆರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.