ಟ್ರಿನಿಡಾಡ್:ವೆಸ್ಟ್ ಇಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಭಾನುವಾರ ನಡೆದ ಬಾರ್ಬಡೋಸ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್ 41 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸ್ಫೋಟಕ ಬ್ಯಾಟಿಂಗ್ ಹೆಸರಾಗಿರುವ ವಿಂಡೀಸ್ ತಂಡದ ಸೀಮಿತ ಓವರ್ಗಳ ನಾಯಕ ಪೊಲಾರ್ಡ್ ತಮ್ಮ ಸಿಕ್ಸರ್ ಹೊಡೆಯುವ ಕೌಶಲ್ಯದಿಂದ ವಿಶ್ವದ ಅತ್ಯುತ್ತಮ ಟಿ-20 ಬ್ಯಾಟ್ಸ್ಮನ್ ಎಂದು ಹೆಸರಾಗಿದ್ದಾರೆ. ನಿನ್ನ ನಡೆದ ಬಾರ್ಬಡೋಸ್ ತಂಡದ ವಿರುದ್ಧ ಒಂದೇ ಕೈಯಲ್ಲಿ 2 ಸಿಕ್ಸರ್ ಸಿಡಿಸಿ ತಮ್ಮ ಶಕ್ತಿಯ ಪ್ರದರ್ಶನ ಮಾಡಿದ್ದಾರೆ.
ಮೊದಲ ಪಂದ್ಯದಲ್ಲಿ ಗಯಾನ ವಿರುದ್ಧ, ನಂತರ ಜಮೈಕಾ ತಲಾವಾಸ್ ವಿರುದ್ಧ ಸುಲಭ ಜಯ ಸಾಧಿಸಿದ್ದ ಟಿಕೆಆರ್ ನಿನ್ನೆ ಮನ್ರೊ, ಬ್ರಾವೋ ಹಾಗೂ ಪೊಲಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 185 ರನ್ಗಳಿಸಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ 31 ವರ್ಷದ ಪೊಲಾರ್ಡ್ 17 ಎಸೆತಗಳಲ್ಲಿ 41 ಚಚ್ಚಿದ್ದರು. ಅವರು ಸಿಡಿಸಿದ 4 ಸಿಕ್ಸರ್ಗಳಲ್ಲಿ ಎರಡು ಸಿಕ್ಸರ್ಗಳನ್ನು ಒಂದೇ ಕೈಯಲ್ಲಿ ಸಿಡಿಸಿದ್ದು, ವಿಶೇಷವಾಗಿತ್ತು. 17 ಓವರ್ನಲ್ಲಿ ಕಿವೀಸ್ ಸ್ಪಿನ್ನರ್ ಬೌಲಿಂಗ್ನಲ್ಲಿ ಮತ್ತು 18ನೇ ಓವರ್ನಲ್ಲಿ ರೇಮಂಡ್ ರೀಫೆರ್ ಬೌಲಿಂಗ್ನಲ್ಲಿ ಒಂದೇ ಕೈಯಲ್ಲಿ ಬೌಂಡರಿ ಗಡಿ ದಾಟಿಸಿದರು.
ಈ ವಿಡಿಯೋವನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಪೊಲಾರ್ಡ್ ಸಿಕ್ಸರ್ ಸಿಡಿಸುವ ಕಲೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ