ಗುವಾಹಟಿ:ಜನವರಿ 5ರಿಂದ ಟೀಂ ಇಂಡಿಯಾ-ಶ್ರೀಲಂಕಾ ತಂಡಗಳ ನಡುವೆ ಮೂರು ಟಿ-20 ಸರಣಿಯ ಮೊದಲ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಇದರ ಮಧ್ಯೆ ಟೀಂ ಇಂಡಿಯಾ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು ಬೌಲಿಂಗ್ ವಿಭಾಗ ಮತ್ತಷ್ಟು ಗಟ್ಟಿಯಾಗಿದೆ.
ಯಾರ್ಕರ್ ಕಿಂಗ್ ಕಮ್ಬ್ಯಾಕ್: ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ಬಿಸಿಸಿಐ ಕೂಡ ಶಾಕ್! - ಬುಮ್ರಾ ಮಾರಕ ಬೌಲಿಂಗ್ ದಾಳಿ
ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾ ತಂಡದಿಂದ ಹೊರಗುಳಿದಿದ್ದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಇದೀಗ ತಂಡಕ್ಕೆ ಸೇರಿಕೊಂಡಿದ್ದು, ಮಾರಕ ಬೌಲಿಂಗ್ ದಾಳಿ ನಡೆಸಲು ಸಜ್ಜುಗೊಂಡಿದ್ದಾರೆ.
ಗಾಯದ ಸಮಸ್ಯೆ ಕಾರಣ ಕಳೆದ ಕೆಲ ತಿಂಗಳಿಂದ ತಂಡದಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ಮೈದಾನದಲ್ಲಿ ಸಖತ್ ಆಗಿ ಬೌಲಿಂಗ್ ಅಭ್ಯಾಸ ನಡೆಸಿದ್ರು. ಈ ವಿಡಿಯೋ ತುಣಕವೊಂದನ್ನ ಬಿಸಿಸಿಐ ತನ್ನ ಅಧಿಕೃತ ಟ್ಟಿಟ್ಟರ್ ಅಕೌಂಟ್ನಲ್ಲಿ ಹಾಕಿಕೊಂಡಿದೆ.
ಡೆತ್ ಬೌಲಿಂಗ್ ಸ್ಪೇಷಲಿಸ್ಟ್ ಎಂಬ ಖ್ಯಾತಿ ಗಳಿಸಿರುವ ಬುಮ್ರಾ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ಬರಿಲು ಸಜ್ಜುಗೊಳ್ಳುತ್ತಿದ್ದು, ಅಭ್ಯಾಸದ ವೇಳೆ ಮಾಡಿರುವ ಬೌಲಿಂಗ್ಗೆ ಬಿಸಿಸಿಐ ಫುಲ್ ಫಿದಾ ಆಗಿದ್ದು, ಶೇರ್ ಮಾಡಿಕೊಂಡಿದೆ. 2016ರಲ್ಲಿ ಟೀಂ ಇಂಡಿಯಾ ಸೇರಿಕೊಂಡಾಗಿನಿಂದಲೂ ಬುಮ್ರಾ ತಂಡದ ಬೌಲಿಂಗ್ ಶಕ್ತಿಯಾಗಿದ್ದು, ತಂಡಕ್ಕೆ ಅನೇಕ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಈ ಹಿಂದೆ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬುಮ್ರಾ ಟೀಂ ಇಂಡಿಯಾ ಪರ ಕೊನೆ ಪಂದ್ಯವನ್ನಾಡಿದ್ದರು. ಇದೀಗ ಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವೇಗಿ ಆಯ್ಕೆಯಾಗಿದ್ದಾರೆ.