ಪುಣೆ :ಏಕದಿನ ಕ್ರಿಕೆಟ್ನ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ತಮ್ಮ ಆಕ್ರಮಣಕಾರಿ ಮತ್ತು ಭಯರಹಿತ ಬ್ರಾಂಡ್ ಕ್ರಿಕೆಟ್ನ ಮುಂದುವರಿಸಿಕೊಂಡು ಹೋಗುವುದನ್ನ ಇಷ್ಟಪಡುತ್ತದೆ ಎಂದು ಶುಕ್ರವಾರ ಭಾರತ ನೀಡಿದ 337 ರನ್ಗಳನ್ನು ಕೇವಲ 43.3 ಓವರ್ಗಳಲ್ಲಿ ಗೆಲ್ಲಲು ಕಾರಣರಾದ ಜಾನಿ ಬೈರ್ಸ್ಟೋವ್ ತಿಳಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಆಂಗ್ಲರ ಓಪನರ್ ಕೇವಲ 66 ಎಸೆತಗಳಲ್ಲಿ 94 ರನ್ಗಳಿಸಿದ್ದರು. ನಂತರ 2ನೇ ಪಂದ್ಯದಲ್ಲಿ 112 ಎಸೆತಗಳಲ್ಲಿ 7 ಸಿಕ್ಸರ್,11 ಬೌಂಡರಿಗಳ ನೆರವಿನಿಂದ 124 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬರೋಬ್ಬರಿ 20 ಸಿಕ್ಸರ್‌ಗಳನ್ನು ಸಿಡಿಸಿ 337ರನ್ಗಳ ಬೃಹತ್ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಿ ಗೆದ್ದು ಮೂರನೇ ಪಂದ್ಯವನ್ನು ಮತ್ತಷ್ಟು ರೋಚಕ ಹಂತಕ್ಕೆ ಕೊಂಡೊಯ್ಯಿತು.
"ನಿಜ ಹೇಳಬೇಕೆಂದರೆ, ಅದು ಅದೇ ಮಾದರಿಯಲ್ಲಿ(ಅಗ್ರೆಸಿಟ್ ಆಟ) ನಡೆಯುತ್ತಿದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ನಾವು ಹೆಚ್ಚು ಸಿಕ್ಸರ್‌ಗಳನ್ನು ಹೊಡೆಯಬೇಕು ಎಂಬುದರ ಕುರಿತು ಯಾವುದೇ ಸಂಭಾಷಣೆ ನಡೆದಿಲ್ಲ.
ಪ್ರಸ್ತುತ ಟಿ20 ಅಥವಾ 50 ಓವರ್ಗಳ ಕ್ರಿಕೆಟ್ನತ್ತ ಒಮ್ಮೆ ನೋಡಿ, ಹೆಚ್ಚು ಬೌಂಡರಿಗಳನ್ನು ಹೊಡೆಯುವ ತಂಡ ಸಾಮಾನ್ಯವಾಗಿ ಗೆಲುವು ಸಾಧಿಸುತ್ತದೆ" ಎಂದು ಬೈರ್‌ಸ್ಟೋವ್ ಶುಕ್ರವಾರದ ಏಕದಿನ ಪಂದ್ಯದ ನಂತರ ಹೇಳಿದ್ದಾರೆ.
20 ಸಿಕ್ಸರ್ಗಳು :ಚೇಸಿಂಗ್ ವೇಳೆ 20 ಸಿಕ್ಸರ್ ಸಿಡಿಸಿದ ಬಗ್ಗೆ ಮಾತನಾಡಿದ ಜಾನಿ, ನೀವು ಬೌಂಡರಿಯತ್ತ ಚೆಂಡನ್ನು ಬಾರಿಸಿದಾಗ ಅದು ಸಿಕ್ಸರ್ ಅಥವಾ ಫೋರ್ ಆಗಿರಲಿ, ನಂತರ ಅದರ ಸಂಖ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಈ ಪಂದ್ಯದಲ್ಲಿ 20 ಸಿಕ್ಸರ್ಗಳು ಬಂದವು.
ಇದು ಪಂದ್ಯದ ಅಸಾಧಾರಣ ಸಂಖ್ಯೆಗಳು. ನಾವು ಬೌಂಡರಿಗಳನ್ನು ಹೊಡೆಯುವುದನ್ನು ಮುಂದುವರಿಸಿದರೆ ಬೌಲರ್ಗಳನ್ನು ಒತ್ತಡಕ್ಕೆ ಸಿಲುಕಿ ತಮ್ಮ ಲೈನ್ ಅಂಡ್ ಲೆನ್ತ್ಗಳನ್ನು ಕಳೆದುಕೊಳ್ಳುತ್ತಾರೆ. ನಂತರ ಸಿಕ್ಸರ್‌ಗಳನ್ನು ಸಿಡಿಸಬಹುದು ಎಂದು ಅವರು ಹೇಳಿದ್ದಾರೆ.
2ನೇ ಏಕದಿನ ಪಂದ್ಯದ ವೇಳೆ 337ರನ್ಗಳನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ, ಜೇಸನ್ ರಾಯ್ 55(52ಎಸೆತ), ಜಾನಿ ಬೈರ್ಸ್ಟೋವ್ 124(112), ಬೆನ್ ಸ್ಟೋಕ್ಸ್ 99(52), ಲಿಯಾಮ್ ಲಿವಿಂಗ್ ಸ್ಟೋನ್ 27(21) ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಬೈರ್ಸ್ಟೋವ್ 7 ಮತ್ತು ಬೆನ್ ಸ್ಟೋಕ್ಸ್ 10 ಸಿಕ್ಸರ್ ಸಿಡಿಸಿದ್ದರು.