ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ತಮ್ಮನ್ನು ಅಗಲಿದ ತಮ್ಮ ತಂದೆಗೆ ಗೌರವ ಸಮರ್ಪಿಸಿದ್ದು, ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಭಾವನಾತ್ಮಕ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಭಾವನಾತ್ಮಕ ವಿಡಿಯೋ ಮೂಲಕ ತಂದೆಗೆ ಗೌರವ ಸಮರ್ಪಿಸಿದ ಹಾರ್ದಿಕ್ ಪಾಂಡ್ಯ - ಹಾರ್ದಿಕ್ ಪಾಂಡ್ಯ ತಂದೆ
ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯ ನಂತರ ಭಾರತಕ್ಕೆ ಮರಳಿದ್ದ ಹಾರ್ದಿಕ್ ಪಾಂಡ್ಯ ಫೆಬ್ರವರಿಯ ಮೊದಲ ವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗೆ ದೀರ್ಘಕಾಲದ ನಂತರ ಮರಳಲಿದ್ದಾರೆ.
ಬಾಲ್ಯದಿಂದ ಇಲ್ಲಿಯವರೆಗೆ ತಂದೆಯ ಜೊತೆ ಕಳೆದ ಪ್ರೀತಿಯ ಕ್ಷಣಗಳ ಹಲವಾರು ಫೋಟೋಗಳನ್ನು ಸೇರಿಸಿದ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ತಂದೆಗೆ ಮೊದಲ ಕಾರು ಕೊಡಿಸಿದ್ದ ಸಂದರ್ಭ, ಅವರ ನೆಚ್ಚಿನ ನಟ ಅಮಿತಾಬ್ ಬಚ್ಚನ್ ಭೇಟಿ ಮಾಡಿಸಿದ್ದ ಸಂದರ್ಭದ ವಿಡಿಯೋವನ್ನು ಕೂಡ ಸೇರಿಸಿದ್ದಾರೆ. ಈ ವಿಡಿಯೋ ನಿಮಗಾಗಿ(ಟು ಡ್ಯಾಡ್) ಎಂದು 27 ವರ್ಷದ ಆಲ್ರೌಂಡರ್ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯ ನಂತರ ಭಾರತಕ್ಕೆ ಮರಳಿದ್ದ ಹಾರ್ದಿಕ್ ಪಾಂಡ್ಯ ಫೆಬ್ರವರಿಯ ಮೊದಲ ವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಗೆ ದೀರ್ಘಕಾಲದ ನಂತರ ಮರಳಲಿದ್ದಾರೆ.