ಅಹ್ಮದಾಬಾದ್: ಉತ್ಸಾಹಿ ಅಭಿಮಾನಿಯೊಬ್ಬ ಭಾರತ ತಂಡ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಬಯೋ ಬಬಲ್ ಮತ್ತು ಭದ್ರತಾ ಪ್ರೋಟೋಕಾಲ್ಗಳನ್ನು ಮುರಿದು ಮೈದಾನಕ್ಕೆ ಬಂದು ನಾಯಕ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಆದರೆ ಅಭಿಮಾನಿ ಮೈದಾನಕ್ಕೆ ಬರುತ್ತಿದ್ದಂತೆ ಭಾರತ ತಂಡದ ನಾಯಕ ತಕ್ಷಣ ಸ್ವಲ್ಪ ದೂರ ಸರಿದು ಆ ಅಭಿಮಾನಿಗೆ ಹಿಂತಿರುಗುವಂತೆ ಸೂಚಿಸಿದ್ದಾರೆ. ಕೊಹ್ಲಿ ಮಾತನ್ನು ಕೇಳಿದ ತಕ್ಷಣ ತನ್ನ ತಪ್ಪನ್ನು ಅರಿತುಕೊಂಡ ಅಭಿಮಾನಿ ತಕ್ಷಣ ಹಿಂದಿರುಗಿದ್ದಾನೆ. ಅಭಿಮಾನಿಯ ಹುಚ್ಚು ಸಾಹಸ ಕಂಡು ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರು ಚಿಯರ್ ಮಾಡಿದ್ದಾರೆ.