ಮುಂಬೈ: ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಅವರ ಹೆಸರಿನಲ್ಲಿ ಹೊಸ ಹಾಡೊಂದನ್ನು ಸಿದ್ದಪಡಿಸುತ್ತಿದ್ದು, ಅದರ ಒಂದು ತುಣುಕನ್ನು ಹಂಚಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ನಲ್ಲಿ ಈ ವಿಚಾರವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಚಾಂಪಿಯನ್ ಡಿಜಿ ಬ್ರಾವೋ, ಮುಂದಿನ ಹಾಡು, ಹಿಸ್ ಬ್ರದರ್, ಹಿಸ್ ಬ್ರದರ್, ಫ್ರಮ್ ಅನದರ್ ಮದರ್" ಧೋನಿಗಾಗಿ ಸಿದ್ದಪಡಿಸಿದ್ದಾರೆಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದೆ.
" ಸಹೋದರನಾದ ಎಂಎಸ್ ಧೋನಿಗಾಗಿ ಹೊಸ ಹಾಡೊಂದನ್ನು ಸಿದ್ದಪಡಿಸುತ್ತಿದ್ದು, ಅದರ ಸ್ಯಾಂಪಲ್ ಹೀಗಿದೆ "ಎಂದು ಹಾಡಿನ ಕೆಲವು ಸಾಲುಗಳನ್ನು ಹೇಳಿದ್ದಾರೆ.