ಕರ್ನಾಟಕ

karnataka

ETV Bharat / sports

ಆಡುವುದು ಗೆಲ್ಲುವುದಕ್ಕೋ ಅಥವಾ 5 ದಿನಗಳ ಕಾಲ ಮನರಂಜಿಸುವುದಕ್ಕೋ? ಕೊಹ್ಲಿ ಕಿಡಿ - ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್​

ಟೆಸ್ಟ್​ ಪಂದ್ಯ ಸ್ಪಿನ್​ ಸ್ನೇಹಿಯಾಗಿರುವುದರಿಂದ 5 ದಿನಗಳಿಗೆ ಮುಗಿಯದಿರುವುದರ ಬದಲು 2 -3 ದಿನಗಳಿಗೆ ಮುಗಿಯುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಸ್ಪಿನ್​ ಪಿಚ್​ಗಳ ಬಗ್ಗೆ ತುಂಬಾ ಹೆಚ್ಚು ಮಾತನಾಡಲಾಗುತ್ತಿದೆ ಎಂದು ವಿರಾಟ್ ಕಿಡಿಕಾರಿದರು.

ಭಾರತ vs ಇಂಗ್ಲೆಂಡ್ ಟೆಸ್ಟ್​
ವಿರಾಟ್​ ಕೊಹ್ಲಿ

By

Published : Mar 3, 2021, 8:17 PM IST

ಅಹ್ಮದಾಬಾದ್​: ಮೊದಲ ಟೆಸ್ಟ್​ ಪಂದ್ಯದಲ್ಲಿ 227 ರನ್​ಗಳಿಂದ ಸೋಲು ಕಂಡಿದ್ದ ಭಾರತ ತಂಡ ನಂತರ ತಿರುಗಿಬಿದ್ದು, 2 ಮತ್ತು 3 ನೇ ಟೆಸ್ಟ್​ ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. ಆದರೆ ಭಾರತ ತಿರುಗಿಬಿದ್ದುದಕ್ಕಿಂತ ಹೆಚ್ಚು ಪಿಚ್​ಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

2ನೇ ಟೆಸ್ಟ್​ ಮೂರೂವರೆ ದಿನಕ್ಕೆ ಮುಗಿದರೆ, 3ನೇ ಟೆಸ್ಟ್​ ಎರಡೇ ದಿನಕ್ಕೆ ಮುಗಿದಿತ್ತು. ಭಾರತ ಕ್ರಮವಾಗಿ 317 ಮತ್ತು 10 ವಿಕೆಟ್​ಗಳಿಂದ ಜಯ ಸಾಧಿಸಿತ್ತು.

ಗುರುವಾರ 4ನೇ ಪಂದ್ಯಕ್ಕೂ ಮುನ್ನ ವಿರಾಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಟೆಸ್ಟ್​ ಪಂದ್ಯ ಸ್ಪಿನ್​ ಸ್ನೇಹಿಯಾಗಿರುವುದರಿಂದ 5 ದಿನಗಳಿಗೆ ಮುಗಿಯದಿರುವುದರ ಬದಲು 2 -3 ದಿನಗಳಿಗೆ ಮುಗಿಯುತ್ತಿರುವುದರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಸ್ಪಿನ್​ ಪಿಚ್​ಗಳ ಬಗ್ಗೆ ತುಂಬಾ ಹೆಚ್ಚು ಮಾತನಾಡಲಾಗುತ್ತಿದೆ ಎಂದು ವಿರಾಟ್ ಕಿಡಿಕಾರಿದರು.

ವಿರಾಟ್​ ಕೊಹ್ಲಿ

ಟೆಸ್ಟ್​ ಪಂದ್ಯ 2 ಅಥವಾ 3 ಪಂದ್ಯಗಳಿಗೆ ಕೊನೆಗೊಳ್ಳಬಾರದಲ್ಲವೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಕೊಹ್ಲಿ, ನೀವು ಟೆಸ್ಟ್​ ಪಂದ್ಯವನ್ನಾಡುವುದು ಗೆಲ್ಲುವುದಕ್ಕೊ ಅಥವಾ 5 ದಿನಗಳವರೆಗೆ ತೆಗೆದುಕೊಂಡು ಹೋಗಿ ಮನರಂಜನೆ ನೀಡುವುದಕ್ಕೋ ಎಂದು ತಿರುಗೇಟು ನೀಡಿದ್ದಾರೆ.

ಇನ್ನು ಭಾರತ ಹೆಚ್ಚು ಸ್ಪಿನ್​ ಸ್ನೇಹಿ ಪಿಚ್​ಗಳನ್ನು ನಿರ್ಮಿಸುತ್ತಿದೆ ಎಂಬ ವಾದವನ್ನು ಸಮರ್ಥಿಸಿಕೊಂಡಿರುವ ಕೊಹ್ಲಿ, ಈಗಾಗಲೆ ಸ್ಪಿನ್​ ಟ್ರ್ಯಾಕ್​ ಬಗ್ಗೆ ಸಾಕಷ್ಟು ಮಾತು ಮತ್ತು ಚರ್ಚೆ ನಡೆಸಲಾಗುತ್ತಿದೆ. ವಿದೇಶಗಳಲ್ಲಿ ಸೀಮ್​ ಪಿಚ್​ನಲ್ಲಿ 2 ಅಥವಾ 3 ದಿನಗಳಿಗೆ ಪಂದ್ಯಗಳು ಮುಗಿದಿವೆ. ಆದರೆ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ, ಕೇವಲ ಸ್ಪಿನ್ ಟ್ರ್ಯಾಕ್​ ಬಗ್ಗೆ ಮಾತ್ರ ಟೀಕಿಸುವುದು ನ್ಯಾಯ ಸಮ್ಮತವಲ್ಲ ಎಂದಿದ್ದಾರೆ.

ಇದನ್ನು ಓದಿ:'ನ್ಯೂಜಿಲ್ಯಾಂಡ್​ನಲ್ಲಿ 3ನೇ ದಿನ 36 ಓವರ್​ಗಳಲ್ಲಿ ಸೋತಿದ್ದೆವು, ಅಂದು ಯಾರೂ ಪಿಚ್​ ಬಗ್ಗೆ ಟೀಕಿಸಲಿಲ್ಲ'

ABOUT THE AUTHOR

...view details