ಪುಣೆ: ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಖಂಡಿತ ತಿರುಗಿ ಬೀಳಲಿದೆ ಎಂದು ಆಲ್ರೌಂಡರ್ ಬೆನ್ ಸ್ಟೋಕ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 66 ರನ್ಗಳಿಂದ ಸೋಲು ಕಂಡಿತ್ತು.
"ಸೋಲು ಕಂಡ ಕಳೆದ ಪಂದ್ಯ ಕೊನೆಗೊಂಡ ರೀತಿಯ ಬಗ್ಗೆ ನಾವು ನಿರಾಶೆಗೊಂಡಿದ್ದೇವೆ. ನಮ್ಮದು ಅದಕ್ಕಿಂತ ಉತ್ತಮ ತಂಡವೆಂದು ನಮಗೆ ತಿಳಿದಿದೆ. ನಾವು ಇದರಿಂದ ತೀವ್ರ ನಿರಾಶೆಗೊಂಡಿದ್ದೇವೆ. ಆದರೆ ಒಂದು ಹಂತದಲ್ಲಿ ನಾವು ಉತ್ತಮ ಸ್ಥಿತಿಯಲ್ಲಿದ್ದೆವು, ಆಟವನ್ನು ತ್ವರಿತವಾಗಿ ಮುಗಿಸಲು ಹೋಗಿ ಎಡವಿದೆವು. ಇದೀಗ ನಮ್ಮ ಎಲ್ಲಾ ಏಕಾಗ್ರತೆ ಈಗ ನಾಳೆ ಪಂದ್ಯದ ಮೇಲಿದೆ"ಎಂದು ಬೆನ್ ಸ್ಟೋಕ್ಸ್ ಹೇಳಿದರು.
ರೂಟ್ ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ವಿಚಾರದಲ್ಲಿ ಕೇಳಿಬಂದ ಟೀಕೆಗೆ ಉತ್ತರಿಸಿದ ಸ್ಟೋಕ್ಸ್, ರೂಟ್ ಇಲ್ಲಿ ಇಲ್ಲದಿರುವಾಗ ಅವರ ಜಾಗವನ್ನು ಯಾರು ತುಂಬಲಿದ್ದಾರೆ ಎಂದು ಚರ್ಚೆಯಾಗಿತ್ತು. ಇದರ ಬಗ್ಗೆ ಯಾವಾಗಲೂ ಚರ್ಚೆಯಾಗುತ್ತದೆ. ಇದರ ಬಗ್ಗೆ ಮಾತನಾಡುವ ಜನರಿಗೆ ನಾನು ಅವಕಾಶ ಮಾಡಿಕೊಟ್ಟು, ನನಗೆ ಟೀಮ್ ಮ್ಯಾನೇಜ್ಮೆಂಟ್ ಏನು ಹೇಳುತ್ತದೆಯೋ ಅದನ್ನು ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಮೊದಲ ಶ್ರೇಯಾಂಕದ ತಂಡವಾಗಿರುವ ಇಂಗ್ಲೆಂಡ್ 2ನೇ ಏಕದಿನ ಪಂದ್ಯದಲ್ಲಿ ಸೋಲು ಕಂಡರೆ ಮೂರು ಸರಣಿಗಳನ್ನು ಕಳೆದುಕೊಂಡರೆ ಅನಗತ್ಯ ದಾಖಲೆಗೆ ಪಾತ್ರವಾಗಲಿದೆ. ಟೆಸ್ಟ್ ಮತ್ತು ಟಿ20 ಸರಣಿ ಸೋತಿರುವುದರ ಒತ್ತಡವೇನಾದರೂ ಇದೆಯೇ ಎಂದು ಕೇಳಿದ್ದಕ್ಕೆ, ನಾವು ನಂಬರ್ 1 ಸ್ಥಾನಕ್ಕೆ ಅರ್ಹರಾಗಿದ್ದೇವೆ. ಏಕೆಂದರೆ ನಮ್ಮ ಹಿಂದಿನ ಫಲಿತಾಂಶಗಳು ಮತ್ತು ನಾವು ಆಡುವ ರೀತಿ ಹಾಗಿದೆ. ನಾವು ಮುಂದಿನ 2 ಪಂದ್ಯಗಳಲ್ಲಿ ಅಗ್ರ ತಂಡವಾಗಿ ಆಡಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸೋಲಿಗೆ ತಂಡದ ಆಟಗಾರರನ್ನ ದೂಷಿಸುವುದಿಲ್ಲ : ಮಾರ್ಗನ್